ಉಪ್ಪಿನಂಗಡಿ: ದ.ಕ. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಅವರು 34 ನೆಕ್ಕಿಲಾಡಿ ಗ್ರಾ.ಪಂ.ಗೆ ಆಗಮಿಸಿ, ಗ್ರಾಮ ಪಂಚಾಯತ್ನ ತ್ಯಾಜ್ಯ ಘಟಕ ಹಾಗೂ ಬೊಳಂತಿಲ ಹಿಂದೂ ರುದ್ರಭೂಮಿಯ ಕಾಮಗಾರಿಯನ್ನು ವೀಕ್ಷಿಸಿದರು.
ಗ್ರಾ.ಪಂ. ತ್ಯಾಜ್ಯ ಘಟಕ ಈಗಾಗಲೇ ಉದ್ಘಾಟನೆಗೊಂಡಿದ್ದು, ಕಾರ್ಯನಿರ್ವಹಿಸುತ್ತಿದೆ. ಬೊಳಂತಿಲದ ಹಿಂದೂ ರುದ್ರಭೂಮಿಯಲ್ಲಿ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ಈ ಎರಡನ್ನೂ ವೀಕ್ಷಿಸಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಕೆ. ಬಂಗೇರ ಅವರಿಂದ ಮಾಹಿತಿ ಪಡೆದುಕೊಂಡರಲ್ಲದೆ, ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭ ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ ಡಿ., ಸದಸ್ಯರಾದ ಸ್ವಪ್ನ, ಪ್ರಶಾಂತ ಎನ್., ವಿಜಯಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ನರೇಗಾ ಎಂಜಿನಿಯರ್ ಮನೋಜ್, ತಾಲೂಕು ಪಂಚಾಯತ್ನ ಐಇಸಿ ಸಂಯೋಜಕ ಭರತ್ರಾಜ್, ತ್ಯಾಜ್ಯ ಘಟಕದ ಸತೀಶ, ರವಿ, ಗ್ರಾ.ಪಂ. ಸಿಬ್ಬಂದಿ ಸೇಸಪ್ಪ ಮತ್ತಿತರರು ಉಪಸ್ಥಿತರಿದ್ದರು.