ಕಿಲ್ಲೆ ಮೈದಾನದಲ್ಲಿ ಕಂಗೊಳಿಸುತಿದೆ ರಂಗೋಲಿ ಫ್ಲವರ್ ಶೋ

0

ಒಂದೇ ಸೂರಿನಡಿ ವಿವಿಧ ಸ್ಟಾಲ್‌ಗಳಲ್ಲಿ ಖರೀದಿಗೆ ಅವಕಾಶ
ಜ.14 ಕೊನೆ ದಿನ

ಪುತ್ತೂರು: ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಜ.11ರಿಂದ 14ರವರೆಗೆ ನಡೆಯುವ ರಂಗೋಲಿ ಫ್ಲವರ್ ಶೋ ಕಾರ್ಯಕ್ರಮ ಆಕರ್ಷಣೀಯ ಕೇಂದ್ರವಾಗಿ ಜನರ ಮನಸೂರೆಗೊಳ್ಳುತ್ತಿದೆ. ರಂಗೋಲಿ ಫ್ಲವರ್ ಶೋ.ನ ಈವೆಂಟ್ ಮ್ಯಾನೆಜ್‌ಮೆಂಟ್ ಮುಖ್ಯಸ್ಥ ಶಶೀಂದ್ರರವರು ದೀಪ ಬೆಳಗಿಸಿ ಫ್ಲವರ್ ಶೋ ಉದ್ಘಾಟಿಸಿದರು. ಕಾರ್ಕಳ ಮತ್ಸ್ಯಕನ್ಯೆಯ ಶಶಿಕುಮಾರ್, ಜ್ಯೋತಿ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಒಂದೇ ಸೂರಿನಡಿ ತಮಗೆ ಬೇಕಾದ ವಿವಿಧ ಐಟಂಗಳನ್ನು ಖರೀದಿಸುವ ಅವಕಾಶ ಫ್ಲವರ್ ಶೋ.ನಲ್ಲಿ ಲಭ್ಯವಿದೆ. ಫ್ಲವರ್ ಶೋ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದ್ದು ಜ.14ರಂದು ಆದಿತ್ಯವಾರ ಕೊನೆಗೊಳ್ಳಲಿದೆ.

100ಕ್ಕಿಂತಲೂ ಹೆಚ್ಚು ಸ್ಟಾಲ್‌ಗಳು:
ಫ್ಲವರ್ ಶೋನಲ್ಲಿ ಪುತ್ತೂರು, ಮಂಗಳೂರು, ಮಲೆನಾಡು, ಉತ್ತರಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗದ ವ್ಯಾಪಾರಸ್ಥರು ಸ್ಟಾಲ್‌ಗಳನ್ನು ಅಳವಡಿಸಿದ್ದಾರೆ. ನರ್ಸರಿ ಗಿಡಗಳು, ಅಕ್ವೇರಿಯಂ ಮೀನುಗಳು, ಸಿದ್ಧಉಡುಪುಗಳು, ಖಾದಿ ಬಟ್ಟೆಗಳು, ಫ್ಯಾನ್ಸಿ ಐಟಂಗಳು, ಮಕ್ಕಳ ಆಟಿಕೆ, ಟಾಟಾ ಕಂಪೆನಿ ಕಾರ್‌ಗಳು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳು, ತರಕಾರಿ ಬೀಜಗಳು, ಗಿಡಗಳು, ಕೃಷಿ ಯಂತ್ರೋಪಕರಣಗಳು, ಗೋಉತ್ಪನ್ನಗಳು, ಅತೀಕಡಿಮೆ ಬೆಲೆಯ ಗೀಸರ್, ವಾಟರ್ ಪಂಪ್‌ಗಳು, ಬುಕ್ ಸ್ಟೇಷನರಿಗಳು, ಒನ್‌ಗ್ರಾಮ್ ಗೋಲ್ಡ್, ತೆಂಗಿನ ಉತ್ಪನ್ನಗಳು, ಜ್ಯೂಸ್ ಐಸ್‌ಕ್ರೀಮ್, ಮಶ್ರೂಮ್‌ನ ವಿವಿಧ ಖಾದ್ಯಗಳು, ಚಿಣ್ಣರ ಪಾರ್ಕ್ ಸೇರಿದಂತೆ ವಿವಿಧ ಸ್ಟಾಲ್‌ಗಳು ಜನರನ್ನು ತನ್ನತ್ತ ಸೆಳೆಯುತ್ತಿದೆ.

13-14 ಖರೀದಿಗೆ ಅವಕಾಶ:
ಫ್ಲವರ್ ಶೋ ಜ.14ರವರೆಗೆ ನಡೆಯಲಿದ್ದು. 13ಮತ್ತು 14ರಂದು ವೀಕೆಂಡ್ ಆದ ಕಾರಣ ಜನರಿಗೆ ಖರೀದಿಗೆ ಭರ್ಜರಿ ಅವಕಾಶವಿದೆ. ಎರಡನೇ ಶನಿವಾರ ಹಾಗೂ ಆದಿತ್ಯವಾರ ರಜಾ ದಿನವಾದುದರಿಂದ ಎಲ್ಲರಿಗೂ ವಿವಿಧ ಸ್ಟಾಲ್‌ಗಳಿಗೆ ಭೇಟಿ ನೀಡಿ ತಮಗಿಷ್ಟವಾದ ಐಟಂಗಳನ್ನು ಖರೀದಿಸಬಹುದು.

ಉಚಿತ ಮೆಹಂದಿ, ರಂಗೋಲಿ ಫ್ಲವರ್ ಶೋ,
ಫ್ಲವರ್ ಶೋ.ನಲ್ಲಿ ಯುವತಿಯರಿಗೆ ಹಾಗೂ ಮಕ್ಕಳಿಗೆ ಉಚಿತವಾಗಿ ಮೆಹಂದಿ ಇಡುವದು ವಿಶೇಷವಾಗಿತ್ತು. ಫ್ಲವರ್ ಶೋಗೆ ಆಗಮಿಸಿದ ಎಲ್ಲರೂ ಉಚಿತವಾಗಿ ತಮಗೆ ಇಷ್ಟವಾದ ಮೆಹಂದಿ ಡಿಸೈನ್ ಹಾಕಿಕೊಳ್ಳುವ ಅವಕಾಶವಿತ್ತು. ಫ್ಲವರ್‌ನಲ್ಲಿ ರಂಗೋಲಿ ಬಿಡಿಸಿದ ಚಿತ್ರವೂ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here