





ಮಕರ ಸಂಕ್ರಮಣದಂದು 2ಸಾವಿರಕ್ಕಿಂತಲೂ ಮಿಕ್ಕಿ ಭಕ್ತಾದಿಗಳು ಭಾಗಿ


ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳವಿಕೆಯಲ್ಲಿ ಧನುಪೂಜೆ ಸಮಾಪ್ತಿಯಾಯಿತು.
ಡಿ.14ರಂದು ಆರಂಭಗೊಂಡಿದ್ದ ಧನುರ್ಮಾಸದ ಧನುಪೂಜೆಯಲ್ಲಿ ಪ್ರತೀದಿನ ಸುಮಾರು 300ಕ್ಕಿಂತಲೂ ಹೆಚ್ಚು ಭಕ್ತಾದಿಗಳು ಭಾಗವಹಿಸಿ ಧನುಪೂಜೆ ಸೇವೆ ಮಾಡಿಸಿದ್ದರು. ಇರ್ದೆ ಪಾಣಾಜೆ, ನಿಡ್ಪಳ್ಳಿ ಹಾಗೂ ಇತರ ಊರಿನಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಪ್ರತೀ ದಿನ ಬೆಳಿಗ್ಗೆ ಪೂಜೆ ನಡೆದ ಬಳಿಕ ಸೇರಿದ್ದ ಭಕ್ತಾದಿಗಳಿಗೆ ಭಕ್ತ ಜನರ ಪ್ರಾಯೋಜಕತ್ವದಲ್ಲಿ ಚಹ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.







ಮಕರ ಸಂಕ್ರಮಣದಂದು 2ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗಿ:
ಜ.14ರ ಮಕರ ಸಂಕ್ರಮಣದಂದು ಕೊನೆಗೊಂಡ ಧನುಪೂಜೆ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯವನ್ನು ವಿಶೇಷವಾಗಿ ಪುಷ್ಪಾಲಂಕೃತಗೊಳಿಸಲಾಗಿತ್ತು. ಸೇರಿದ್ದ ಎಲ್ಲಾ ಭಕ್ತಾದಿಗಳಿಗೆ ದೋಸೆ, ಗೋಳಿಬಜೆ, ಕೇಸರಿಬಾತ್ ಹಾಗೂ ಚಹ ವ್ಯವಸ್ಥೆ ಮಾಡಲಾಗಿದ್ದು ಒಂದು ತಿಂಗಳ ಕಾಲ ಬಹಳ ವಿಜ್ರಂಭಣೆಯಿಂದ ಧನುಪೂಜೆ ನಡೆಯಿತು.





