ಜಮೀನಿನಲ್ಲಿ ಹಾಕಿದ ತಂತಿ ಬೇಲಿ ವಿಚಾರದಲ್ಲಿ ಎರಡು ತಂಡಗಳ ನಡುವೆ ವಾಗ್ವಾದ-ಅವಾಚ್ಯ ಶಬ್ಧಗಳಿಂದ ನಿಂದನೆ, ಜೀವ ಬೆದರಿಕೆ-ಇತ್ತಂಡಗಳಿಂದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು

0

ಪುತ್ತೂರು: ಜಮೀನಿನಲ್ಲಿ ಹಾಕಿದ ತಂತಿ ಬೇಲಿ ವಿಚಾರದಲ್ಲಿ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಇತ್ತಂಡಗಳಿಂದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜ.15ರ ರಾತ್ರಿ ಆಕ್ಟಿವಾ ಸ್ಕೂಟರ್‌ ನ್ನು ತೋಟದ ಬಳಿ ನಿಲ್ಲಿಸಿ ನಡೆದುಕೊಂಡು ಮನೆಗೆ ಹೋಗುತ್ತಿರುವ ವೇಳೆ ಕೇಶವ, ಧನಂಜಯ, ಜಗದೀಶ್‌ ನನ್ನನ್ನು ತಡೆದು ನಿಲ್ಲಿಸಿ, ಹಲ್ಲೆ ನಡೆಸಿರುತ್ತಾರೆ. ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ನನ್ನ ತಾಯಿ ಸವಿತಾ ಅವರಿಗೂ ಕೇಶವ ಎಂಬಾತ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾನೆ. ನನ್ನ ಸಹೋದರ ಗಾಯಗೊಂಡ ನನ್ನ ತಾಯಿಯನ್ನು ನಗರದ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾನೆ. ಗಲಾಟೆಯ ವೇಳೆ ನನ್ನ ಮೊಬೈಲ್ ಮತ್ತು 25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ ಎಂದು ಸಂತೋಷ್‌ ದೂರು ತಿಳಿಸಿದ್ದಾರೆ. ಸಂತೋಷ್‌ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ 07-2024 ಕಲಂ: IPC1860 (U/s.341,447,323,324,506,34) ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಪಟ್ಟಂತೆ ಮತ್ತೊಂದು ತಂಡದ ಕೇಶವ ನಾಯ್ಕ್, ಸಂತೋಷ್‌, ಸಂದೀಪ್‌ ಮತ್ತು ಸಂತೋಷ್‌ ಅವರ ಪತ್ನಿಯರು, ಕೊರಗಪ್ಪ ನಾಯ್ಕ್‌ ಮತ್ತು ಸವಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಜ.15ರಂದು ರಾತ್ರಿ ಸಂದೀಪ ಮತ್ತು ಸಂತೋಷ ರವರ ಪತ್ನಿಯರು ನನ್ನ ಜಮೀನಿನ ತಂತಿ ಬೇಲಿಯನ್ನು ಕಿತ್ತಿ ಹಾಕಲು ಪ್ರಾರಂಭಿಸಿದ್ದು, ಈ ಬಗ್ಗೆ ಕೇಳಿದಾಗ ನನಗೆ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾರವರೂ ಕೂಡಾ ನನಗೆ ಅವಾಚ್ಯವಾಗಿ ಬೈದಿರುತ್ತಾರೆ. ನಾನು ನನ್ನ ಚಿಕ್ಕಪ್ಪನ ಮಗ ಧನಂಜಯರ ಜೊತೆಗೆ ತೆರಳುತ್ತಿದ್ದಾಗ ಕೊರಗಪ್ಪ ನಾಯ್ಕ್ ಅವರ ಮಗ ಸಂತೋಷ್‌ ನನ್ನ ತಲೆಗೆ ಹೆಲ್ಮೇಟ್ ನಲ್ಲಿ ಹಲ್ಲೆ ನಡೆಸಿರುತ್ತಾನೆ. ಗಲಾಟೆಯ ಶಬ್ದ ಕೇಳಿ ನನ್ನ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ ಮತ್ತು ಇನ್ನಿತರರು ಹಲ್ಲೆ ನಡೆಸಿರುತ್ತಾರೆ. ಗಾಯಗೊಂಡ ನನ್ನನ್ನು ಮತ್ತು ತಾಯಿ ಜಯಂತಿಯನ್ನು ಧನಂಜಯ್ ಮತ್ತು ಜಗದೀಶ್ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶವ ನಾಯ್ಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 08-2024 ಕಲಂ: IPC1860 (U/s. IPC 1860 (U/s-323,324,504,506,34) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತಂಡಗಳ ಕೇಸನ್ನು ದಾಖಲಿಸಿಕೊಂಡ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here