ಮಿತ್ತೂರು: ಹಿಟ್ ಆಂಡ್ ರನ್ -ಸ್ಕೂಟರ್‌ನಲ್ಲಿದ್ದ ದಂಪತಿಗೆ ಗಾಯ

0

ಪುತ್ತೂರು: ಸ್ಕೂಟರ್‌ವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಜ.14ರಂದು ನಡೆದ ಬಗ್ಗೆ ವರದಿಯಾಗಿದೆ.


ಕಬಕ ಗ್ರಾಮದ ಗಂಗಾಧರ ಪಿ ಮತ್ತು ಅವರ ಪತ್ನಿ ಶಾರದಾ ಅವರು ಮಿತ್ತೂರು ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಅವರ ಸ್ಕೂಟರ್‌ನ ಹಿಂಬಂದಿಗೆ ಕಾರೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಗಂಗಾಧರ ಮತ್ತು ಸಹ ಸವಾರೆ ಅವರ ಪತ್ನಿ ಶಾರದಾ ಅವರು ರಸ್ತೆಗೆ ಬಿದ್ದು ಗಾಯವಾಗಿದೆ. ಅಪಘಾತ ಎಸಗಿದ ಕಾರಿನ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಗಾಯಾಳು ದಂಪತಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here