ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ – ಕೌಕ್ರಾಡಿ ಇದರ ಆಶ್ರಯದಲ್ಲಿ 46 ನೇ ವರ್ಷದ ಮಕರ ಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ. 15ರ ಪ್ರಾತಃ ಕಾಲ 6. 30 ರಿಂದ ಜ.16ರ ಪ್ರಾತಃ ಕಾಲ 6.30ರ ತನಕ ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಜ.15 ರಂದು ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಪೌರೋಹಿತ್ಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾಪೂಜೆ, ನಂತರ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ, ಮಧ್ಯಾಹ್ನ ಶ್ರೀ ಮಹಾರಂಗಪೂಜೆ, ಮಹಾಪೂಜೆ, ಬಳಿಕ ಪ್ರಸಾರ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ನೀಲಾಂಜನ ದೀಪ ದರ್ಶನ ಮೆರವಣಿಗೆ, ಬಳಿಕ ದೀಪಾರಾಧನೆ, ಪುಷ್ಪಾಭಿಷೇಕ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಜ. 16 ರಂದು ಪ್ರಾತಃ ಕಾಲ ಭಜನಾ ಮಂಗಳೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್., ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಕೋಶಾಧಿಕಾರಿ ವಿನೋದ್ ಕುಮಾರ್ ಬಾಕಿಜಾಲು, ಜೊತೆ ಕಾರ್ಯದರ್ಶಿ ಮೋಹನ ಕಟ್ಟೆಮಜಲು, ಸದಸ್ಯರಾದ ಚಂದ್ರಶೇಖರ ಬಾಣಜಾಲು, ರಾಕೇಶ್ ಎಸ್ ಗೌಡ, ಉದಯ ಕುಮಾರ್ ಗೌಡ, ರವಿಪ್ರಸಾದ್ ಶೆಟ್ಟಿ ರಾಮನಗರ, ಪುರುಷೋತ್ತಮ ಶೆಟ್ಟಿ, ರಘುನಾಥ ಕೆ., ರಮೇಶ ಬಾಣಜಾಲು, ಮಂಜುನಾಥ ಗೌಡ, ಶ್ರೀನಿವಾಸ ಆಚಾರ್ಯ, ಜನಾರ್ದನ ಪೊಸೊಳಿಗೆ, ಉಮೇಶ್ ಪೂಜಾರಿ ಪೊಸೊಳಿಗೆ, ರಕ್ಷಿತ್ ಮಡಿವಾಳ, ಚಂದ್ರಶೇಖರ ರೈ ರಾಮನಗರ, ರಾಜೇಶ್ ಕೆಂಚರಮಕ್ಕಿ, ಗೌರವ ಸಲಹೆಗಾರ ಟಿ ಕೆ ಶಿವದಾಸನ್, ಭಜನಾ ಸಮಿತಿ ಅಧ್ಯಕ್ಷ ಪರಮೇಶ್ವರ, ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ, ಉಪಾಧ್ಯಕ್ಷೆ ವಿಶಾಲಾಕ್ಷಿ ನಾರಾಯಣ ಆಚಾರ್ಯ, ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ :
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ವಿದುಷಿ ಸುರೇಖಾಹರೀಶ್ ಅವರ ಶಿಷ್ಯ ವೃಂದ ಉಕ್ಷಿಪ್ತ ನೃತ್ಯ ಕಲಾ ಶಾಲೆ ನೆಲ್ಯಾಡಿ – ಮಂಗಳೂರು ಇವರಿಂದ ಭರತ ನಾಟ್ಯ ನಡೆಯಿತು. ರಾತ್ರಿ ಬಾಚಕೆರೆ ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ರವಿ ಕುಮಾರ್ ಸುರತ್ಕಲ್ ವಿರಚಿತ ದಾಖಲೆ ಪ್ರದರ್ಶನ ನೀಡಿದ ಕಥಾನಕ ತುಳು ಯಕ್ಷಗಾನ ‘ ನಾಗರ ಪಂಚಮಿ ‘ ಪ್ರದರ್ಶನಗೊಂಡಿತು