ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಾವಧಿ ನೇಮಕ್ಕೆ ಆಗಿನದ ಕುದಿ

0

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ.24ರಂದು ಜರುಗಲಿರುವ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವದ ಅಂಗವಾಗಿ ಜ.18ರಂದು ಬೆಳಿಗ್ಗೆ ಗಂಟೆ 11.30ಕ್ಕೆ ದೈವಸ್ಥಾನದಲ್ಲಿ ಆಗಿನದ ಕುದಿ ಇಡುವ ಕಾರ್ಯಕ್ರಮ ನಡೆಯಿತು.

ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕಾರ್ಜಾಲು ಗುತ್ತು ಅಜಿತ್ ಕುಮಾರ್ ಕಲ್ಲೇಗ ಅವರು ಪ್ರಾರ್ಥನೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಜಿನ್ನಪ್ಪ ಗೌಡ ಕಲ್ಲೇಗ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ , ನಗರಸಭಾ ಸದಸ್ಯ ದಿನೇಶ್ ಶೇವಿರೆ, ಜಿನ್ನಪ್ಪ ಪುಜಾರಿ ಮುರ, ಕಲ್ಕುಡ ದೈವದ ನರ್ತಕ ಹೊನ್ನಪ್ಪ ನಲಿಕೆ, ಕಲ್ಲುರ್ಟಿ ದೈವದ ನರ್ತಕ ರೋಹಿತ್, ಹಿಂದೆ ನರ್ತಕರಾಗಿದ್ದ ವಸಂತ ಮತ್ತು ಚೋಮ ಸೇರಿದಂತೆ ಊರಿನ ಹಿರಿಯರಾದ ಚಂದ್ರಶೇಖರ ಗೌಡ ಕಲ್ಲೇಗ, ನಾರಾಯಣ ಗೌಡ ಕಲ್ಲೇಗ, ಗಿರಿಯಪ್ಪ ಗೌಡ ಪೋಳ್ಯ, ಪದ್ಮಯ್ಯ ಗೌಡ, ರಾಜರಾಮ್ ಪ್ರಭು, ಮುರಳಿ ಕಲ್ಲೇಗ, ಮನೋಹರ್ ಕಲ್ಲೇಗ, ಜಿನ್ನಪ್ಪ ನಾಯ್ಕ್, ದಿವಾಕರ, ಗಂಗಾಧರ ಸಪಲ್ಯ, ಬಾಬು ಗೌಡ ಕಲ್ಲೇಗ, ಸಂಜೀವ ಗಾಣಿಗ, ಅಣ್ಣಪೂಜಾರಿ, ಬೇಬಿ ಗೌಡ, ಸುಂದರ ಗೌಡ, ಆನಂದ ನಲಿಕೆ, ರುಕ್ಮಯ್ಯ, ಜಯರಾಮ ಗೌಡ, ಸಿದ್ಧಾಂತ್ ಅಜೇಯನಗರ ಸಹಿತ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಆಗಿನದ ಕುದಿಯ ಬಳಿಕ ಹರಕೆ ನೇಮಕ್ಕೆ ಸಂಬಂಧಿಸಿ ದೈವದ ನರ್ತಕರಿಗೆ ಸಂಪ್ರದಾಯದಂತೆ ವೀಲ್ಯ ನೀಡಲಾಯಿತು. ಮಧ್ಯಾಹ್ನದ ವೇಳೆ ತಹಸೀಲ್ದಾರ್ ಶಿವಶಂಕರ್ ಮತ್ತು ದೈವಸ್ಥಾನದ ಆಡಳಿತಾಧಿಕಾರಿ ಚಂಗಪ್ಪ ಅವರು ಆಗಮಿಸಿದ್ದರು. ಇದೇ ಸಂದರ್ಭ ದ್ವಾರಕ ಕನ್‌ಸ್ಟ್ರಕ್ಷನ್ಸ್‌ನ ಗೋಪಾಲಕೃಷ್ಣ ಭಟ್ ಆಗಮಿಸಿದ್ದರು.

ಜ.20ಕ್ಕೆ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ
ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವರ್ಷಾವಧಿ ನೇಮಕ್ಕೆ ಸಂಬಂಧಿಸಿ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆಯು ಜ.20ರಂದು ಸಂಜೆ ಗಂಟೆ 3.30ಕ್ಕೆ ದರ್ಬೆ ವೃತ್ತದಿಂದ ಬೊಳುವಾರು ತನಕ ನಡೆಯಲಿದೆ. ಆಮಂತ್ರಣ ವಿತರಣೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹೇಳಿದರು.

LEAVE A REPLY

Please enter your comment!
Please enter your name here