ಕಡಬ: ಕಡಬ ತಾಲೂಕಿನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಯವರ ಆದೇಶ ದಂತೆ ಕಡಬ ತಾಲೂಕು ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ಕಡಬ ತಹಶಿಲ್ದಾರರ ಕಛೇರಿಯಲ್ಲಿ ನಡೆಯಿತು. ಉಪ ತಹಶೀಲ್ದಾರ್ ಮನೋಹರ್ ಅವರು ಗ್ರಾಮ ಒನ್ ಸೇವಾ ಕೇಂದ್ರದ ಮಾಹಿತಿ ನೀಡಿ ಅರ್ಜಿ ವಿಲೇವಾರಿ ಹಾಗೂ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸಭೆಗೆ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಕುಂದುಕೊರತೆಗಳನ್ನು ಆಲಿಸಿ, ಸರಕಾರದ 750 ಸೇವೆಗಳನ್ನು ಗ್ರಾಮ ಒನ್ ನಲ್ಲಿ ಅನುಷ್ಠಾನ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಜಿಲ್ಲಾ ಸಮನ್ವಯ ಅಧಿಕಾರಿ ಅಕ್ಷತಾರವರು ಅಗತ್ಯ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಕಡಬ ಉಪ ತಹಶಿಲ್ದಾರರ ರಾದ ಗೋಪಾಲ,
ಸಹದುಲ್ಲಾ ಖಾನ್, ವಿಷಯ ನಿರ್ವಾಹಕ ಲಿಕೇಶ್, ಕಂದಾಯ ನೀರಿಕ್ಷಕರಾದ ಪೃಥ್ವಿ, ಹಾಗೂ ಕಡಬ ತಾಲೂಕಿನ ಗ್ರಾಮಾಡಳಿತಾಧಿಕಾರಿಗಳು ಹಾಗೂ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.