





ಪುತ್ತೂರು: ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಅರಣ್ಯ ಇಲಾಖೆಯ ಅರಿಯಡ್ಕ ಬ್ಲಾಕ್ ನೆಡುತೋಪಿನಲ್ಲಿ ಬೆಂಕಿ ಬಿದ್ದ ಮರಗಳು ಬೆಂಕಿಗಾಹುತಿಯಾದ ಘಟನೆ ಜ.18ರಂದು ಮಧ್ಯಾಹ್ನ ನಡೆದಿದೆ.
ಪುತ್ತೂರು ಅಗ್ನಿ ಶಾಮಕ ಇಲಾಖೆಯವರು, ಪಾಣಾಜೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಮತ್ತು ಲಿಂಗರಾಜು, ಮತ್ತು ಅರಿಯಡ್ಕ ಅರಣ್ಯ ವೀಕ್ಷಕ ದೇವಪ್ಪ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಪ್ರದೇಶದಲ್ಲಿ ವಿದ್ಯುತ್ ಎಚ್‌ಟಿ ಲೈನ್‌ನಿಂದ ಹೋಗುತ್ತಿದ್ದು ಶಾರ್ಟ್ ಸಕ್ಯೂಟ್‌ನಿಂದಾಗಿ ಬೆಂಕಿ ತಗಲಿರುವುದಾಗಿ ತಿಳಿದುಬಂದಿದೆ.








