ಮುಂಡೂರು:ಹಲ್ಲೆ ಪ್ರಕರಣ:ಮೂವರು ಆರೋಪಿಗಳಿಗೆ ಜಾಮೀನು

0

ಪುತ್ತೂರು:ಮುಂಡೂರು ಸಮೀಪ ಎರಡು ತಂಡಗಳೊಳಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಂದು ತಂಡದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಮುಂಡೂರು ಗ್ರಾಮದ ಕೇಶವ ನಾಯ್ಕ್(35ವ.) ಅವರು ನೀಡಿದ್ದ ದೂರಿನಲ್ಲಿ ಆರೋಪಿಗಳಾಗಿದ್ದ ಸಂತೋಷ್ ಬಿ.ಕೆ.,ಕೊರಗಪ್ಪ ನಾಯ್ಕ ಮತ್ತು ಶ್ರೀಮತಿ ಸವಿತಾ ಅವರು ಪುತ್ತೂರಿನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದು ನ್ಯಾಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.ಆರೋಪಿಗಳ ಪರವಾಗಿ ವಕೀಲರಾದ ಶ್ಯಾಮ್ ಭಟ್ ಶಾಂತಿಗೋಡು ವಾದಿಸಿದ್ದರು.

ಜ.15ರ ರಾತ್ರಿ ಸಂದೀಪ ಮತ್ತು ಸಂತೋಷರವರ ಪತ್ನಿಯರು ನಮ್ಮ ಜಮೀನಿನ ತಂತಿ ಬೇಲಿಯನ್ನು ಕಿತ್ತು ಹಾಕಲು ಪ್ರಾರಂಭಿಸಿದ್ದು, ಇದನ್ನು ವಿಚಾರಿಸಿದಾಗ ನನಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದರು.ಈ ಸಂದರ್ಭ ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾರವರೂ ನನಗೆ ಬೈದಿದ್ದರು.ಈ ಬಗ್ಗೆ ದೂರು ನೀಡಲೆಂದು ನಾನು ಚಿಕ್ಕಪ್ಪನ ಮಗ ಧನಂಜಯರ ಜೊತೆಗೆ ತೆರಳುತ್ತಿದ್ದಾಗ ಕೊರಗಪ್ಪ ನಾಯ್ಕ್ರವರ ಮಗ ಸಂತೋಷರವರು ನನ್ನ ತಲೆಗೆ ಹೆಲ್ಮೆಟ್‌ನಲ್ಲಿ ಹಲ್ಲೆ ನಡೆಸಿದ್ದಾರೆ.ಗಲಾಟೆಯ ಶಬ್ದ ಕೇಳಿ ನನ್ನ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ, ಇನ್ನಿತರರು ಹಲ್ಲೆ ನಡೆಸಿರುತ್ತಾರೆ’ ಎಂದು ಕೇಶವ ನಾಯ್ಕ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

ಮುಂಡೂರು ಗ್ರಾಮ ಪುತ್ತೂರು ನಿವಾಸಿ ಸಂತೋಷ ಬಿ.ಕೆ.(32ವ) ಅವರು ಈ ಕುರಿತು ನೀಡಿದ್ದ ದೂರಿನಲ್ಲಿನಾನು ಅಯೋಧ್ಯೆ ಶ್ರೀ ರಾಮಮಂದಿರದ ಮಂತ್ರಾಕ್ಷತೆ ವಿತರಣೆಯ ಬೂತ್ ಸಮಿತಿ ಸಂಚಾಲಕನಾಗಿದ್ದು, ಜ.15ರ ರಾತ್ರಿ ನಮ್ಮ ತೋಟದ ಒಳಗೆ ಸ್ಕೂಟರ್ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ನಮ್ಮ ತೋಟಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಪುತ್ತಿಲ ಪರಿವಾರದ ಕೇಶವ, ಧನಂಜಯ, ಜಗದೀಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಈ ವೇಳೆ ನನ್ನ ತಾಯಿ ಸವಿತಾ ಅವರು ಅಲ್ಲಿಗೆ ಬಂದಾಗ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.ಗಲಾಟೆಯ ಸಂದರ್ಭ ನನ್ನ ಮೊಬೈಲ್, ರೂ.25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ’ ಎಂದು ತಿಳಿಸಿದ್ದರು. ಪೊಲೀಸರು ಎರಡೂ ಕಡೆಯವರ ದೂರು ದಾಖಲಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here