ಜ.22 ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀರಾಮೋತ್ಸವ

0

ಪುಣಚ : ಅಯೋಧ್ಯೆ ಶ್ರೀ ರಾಮ ಜನ್ಮ‌ ಭೂಮಿಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ಲೋಕಾರ್ಪಣೆ ಹಾಗೂ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶ್ರೀ ರಾಮೋತ್ಸವ ಕಾರ್ಯಕ್ರಮ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜ.22ರಂದು ನಡೆಯಲಿದೆ.


ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪ ಪ್ರಜ್ವಲನೆ, ಮೂಲ ರಾಮಾಯಣ ಪಾರಾಯಣ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಕ ಚೆಂಡೆ ಪ್ರದರ್ಶನ, ರಾಮಾಯಣಕ್ಕೆ ಸಂಬಂಧಿಸಿದ ರಸಪ್ರಶ್ನೆ, ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರಿಗೆ ಗೌರವಾರ್ಪಣೆ, ಅಯೋಧ್ಯಾ ಹೋರಾಟ ಇತಿಹಾಸದ ಮೆಲುಕು ಕಾರ್ಯಕ್ರಮ, ಶ್ರೀರಾಮದೇವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರ, ಶ್ರೀ ಮಹಿಷಮರ್ದಿನಿ ಯಕ್ಷ ಬಳಗದವರಿಂದ ಶ್ರೀ ರಾಮ ದರ್ಶನ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪುಣಚ ರಾಮಭಕ್ತರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here