





ಪುತ್ತೂರು: ಇರ್ದೆಯ ಗ್ಯಾರೇಜೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 69800 ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಪುತ್ತೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.18ರಂದು ಸಂಜೆ ಗ್ಯಾರೇಜ್ ಮಾಲಕರು ಕೆಲಸ ಮುಗಿಸಿ ಗ್ಯಾರೇಜ್ ಗೆ ಬೀಗ ಹಾಕಿ ಮನೆಗೆ ತೆರಳಿದ್ದರು.ತಡರಾತ್ರಿ ಗ್ಯಾರೇಜಿನ ಬಾಗಿಲು ತೆರೆದಿರುವ ಬಗ್ಗೆ ಯಾರೋ ಫೋನ್ ಮೂಲಕ ಮಾಹಿತಿ ನೀಡಿದ್ದು, ಬಂದು ನೋಡಿದಾಗ ಕಳ್ಳರು ಗ್ಯಾರೇಜಿನ ಬೀಗ ಮುರಿದು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ.


ಗ್ಯಾರೇಜ್ ಮಾಲಕರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 15-2024 ಕಲಂ: IPC 1860 (U/s-457, 380ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.














