ಪುತ್ತೂರು:ಅಯೋಧ್ಯೆಯಲ್ಲಿ ನಡೆದ ರಾಮನ ಪ್ರಾಣಪ್ರತಿಷ್ಠಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಯೋಧ್ಯಾ ಹೋರಾಟದ ಅನುಭವ ಕಥನ ಕಾರ್ಯಕ್ರಮ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಪರಿವೀಕ್ಷಕಿ ಮೀನಾಕ್ಷಿ ಮಾತನಾಡಿ ರಾಮಜನ್ಮಭೂಮಿ ಹೋರಾಟ ದೇಶದ ಜನತೆಯ ಐಕ್ಯತೆ, ಧಾರ್ಮಿಕ ಪ್ರಜ್ಞೆ ಹಾಗೂ ದೇಶದ ಸಾಂಸ್ಕೃತಿಕ ಉಳಿವಿಗೆ ಕೈಗನ್ನಡಿಯಾಗಿದೆ. ಈ ದಿಶೆಯಲ್ಲಿ ಹಿರಿಯರು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶದ ಭಕ್ತಿ, ಶ್ರದ್ಧಾ ಕೇಂದ್ರವಾದ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕರಾಳ ದಿನಗಳು ಅವಿಸ್ಮರಣೀಯ ಎಂದ ಅವರು ತಾವೂ ಕರಸೇವೆಯಲ್ಲಿ ಭಾಗವಹಿಸಿದ ನೆನಪುಗಳನ್ನು ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಹಂಚಿಕೊಂಡರು.
ಶ್ರೀರಾಮ ಪ್ರಾಣ ಪ್ರತಿಷ್ಠೆ ಅಭಿಯಾನ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೌಢವಿಭಾಗದ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.