ಬೆಟ್ಟಂಪಾಡಿ: ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ಸಂಭ್ರಮವನ್ನು ಹಿಂದೂ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು. ರೆಂಜ ಶ್ರೀರಾಮನಗರದಲ್ಲಿರುವ ಶ್ರೀನಿಧಿ ಫಾರ್ಮ್ಸ್ ಮುಂಭಾಗದಲ್ಲಿ ವಿಶ್ವಹಿಂದು ಪರಿಷದ್ ವತಿಯಿಂದ ಶ್ರೀರಾಮನ ವಿಗ್ರಹ ಮಾದರಿಯನ್ನು ಇಟ್ಟು ದೀಪಾಲಂಕಾರಗಳಿಂದ ಅಲಂಕರಿಸಲಾಯಿತು.
ಕರಸೇವಕರಾದ ಸದಾನಂದ ಶೆಟ್ಟಿ ಕೊಮ್ಮಂಡ, ರಾಧಾಕೃಷ್ಣ ರೈ ಸೇರ್ತಾಜೆ ದೀಪ ಬೆಳಗಿಸಿದರು. ಅಲ್ಲದೇ ಕಾರ್ಯಕರ್ತರು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಹಿತ ಸಾವಿರಕ್ಕೂ ಮಿಕ್ಕಿ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿಕೊಂಡರು.