ಕಡಬ : ಕಡಬ ತಾಲೂಕಿನ ಕೊಯಿಲ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿರುವ ಕುರಿತು ಮಾಹಿತಿ ತಿಳಿದು ದಾಳಿ ನಡೆಸಿದ ಕಡಬ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಯಿಲ ಗ್ರಾಮದ ಕಲಾಯಿ ಮನೆ ನಿವಾಸಿಗಳಾದ ಜಕಾರಿಯ, ಶಿಯಾಬ್ ,ಮುನವರ್ ಹುಸೈನ್ ಬಂಧಿತ ಆರೋಪಿಗಳು.
ಕಡಬ ತಾಲೂಕು ಕೊಯಿಲಾ ಗ್ರಾಮದ ಕಲಾಯಿ ಗುತ್ತು ಎಂಬಲ್ಲಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ತನಿಖಾ ಎಸೈ ಅಕ್ಷಯ್ ಡವಗಿ ಅವರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೊಯಿಲಾ ಗ್ರಾಮದ ಕಲಾಯಿ ಎಂಬಲ್ಲಿರುವ ಸುಲೈಮಾನ್ ಎಂಬಾತನ ಮನೆಯ ಪಕ್ಕದ ಶೆಡ್ನಲ್ಲಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿಗಳಾದ ಜಕಾರಿಯ,ಶಿಯಾಬ್,ಮುನವರ್ ಹುಸೈನ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಸುಲೈಮಾನ್ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ 70 ಕೆ.ಜಿ ದನದ ಮಾಂಸ ಹಾಗೂ ಪ್ಲಾಸ್ಟಿಕ್ ಟಾರ್ಪಲ್ ಮೇಲಿದ್ದ ದನದ ಕಾಲಿನ ಮೂಳೆ ಮತ್ತು ದನದ ಚರ್ಮ ಹಾಗೂ ನಿರುಪಯುಕ್ತ ದನದ ತ್ಯಾಜ್ಯ ಹಾಗೂ ತೂಕ ಮಾಡುವ ಎಲೆಕ್ಟಿçಕ್ ತೂಕ ಮಾಪನ-01 ನೈಲಾನ್ ಹಗ್ಗ-01,ಕಬ್ಬಿಣದ ಸತ್ತಾರ್-03, ಮರದ ಹಿಡಿ ಇರುವ ಚಾಕುಗಳು-02 ಹಾಗೂ ಮಾಂಸ ಮಾಡಲು ಉಪಯೋಗಿಸಿದ ಮರದ ತುಂಡು-01 ಹಾಗೂ ಪಿಕಪ್ ವಾಹನವನ್ನು ಪೊಲೀಸರು ವಶಪಡಿಕೊಂಡಿದ್ದಾರೆ.