ಕಸಾಪ , ಜೆಸಿಐ , ಪ್ರಗತಿ ಸ್ಟಡಿ ಸೆಂಟರ್ ನಿಂದ ಉಚಿತ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಗಾರ

0

ಪುತ್ತೂರು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜೆ.ಸಿ.ಐ ಪುತ್ತೂರು ಇದರ ನೇತೃತ್ವದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಸಹಯೋಗದಲ್ಲಿ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಗಾರ ಜನವರಿ. 21 ರಂದು ನಡೆಯಿತು.

ಪುತ್ತೂರು ಜೆ.ಸಿ.ಐ ತರಬೇತಿ ವಿಭಾಗದ ಉಪಾದ್ಯಕ್ಷ ಭಾಗ್ಯೇಶ್ ರೈ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ಪಂಚಭೂತಗಳಲ್ಲಿ ಅಗ್ನಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ. ಏಕೆಂದರೆ ಅಗ್ನಿ ಮೇಲ್ಮುಖವಾಗಿ ಉರಿಯುತ್ತದೆ. ಈ ರೀತಿ ವಿದ್ಯಾರ್ಥಿಗಳ ಪ್ರಗತಿ ಸದಾ ಉನ್ನತ ಮಟ್ಟದಲ್ಲಿರಲಿ ಎಂದರು.ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಮಾತನಾಡಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬದುಕಿನಲ್ಲಿ ಕವಲುದಾರಿಗಳಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೋಲುಗಳಿಗೆ ಹಿಂಜರಿಯದೆ ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ ಎಂದರು.

ಅತಿಥಿಗಳು ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾತನಾಡಿ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ ಭಯವನ್ನು ತ್ಯಜಿಸಿ ಎಂದರು.ಕಾರ್ಯಕ್ರಮ ಅದ್ಯಕ್ಷೆ ಶಂಕರಿ ಶರ್ಮ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಮೂರ್ತಿ ಅಳಿಕೆ ( ಗಣಿತ), ಶೃತಿ (ಭೌತಶಾಸ್ತ್ರ), ರಮ್ಯ ಭಟ್ ( ರಸಾಯನಶಾಸ್ತ್ರ ಮತ್ತು ವಿಜ್ಞಾನ), ಸುಲಕ್ಷಣ (ಜೀವಶಾಸ್ತ್ರ),ಹೇಮಲತಾ ಗೋಕುಲ್‌ನಾಥ್ (ಗಣಿತ), ಪ್ರಮೀಳಾ ಎನ್. ಡಿ. (ಸಮಾಜ ವಿಜ್ಞಾನ ಹಾಗೂ ಕನ್ನಡ) ವಿಷಯಗಳ ಕುರಿತು ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿಭಾಗಗಳಿಗೆ ಪರೀಕ್ಷಾ ತಯಾರಿಯ ಕುರಿತು ಮಾಹಿತಿ ನೀಡಿದರು. ಒಟ್ಟು 180 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಜೆ.ಸಿ.ಐ ಪುತ್ತೂರು ಇದರ ಉಪಾದ್ಯಕ್ಷರು, ಪದಾಧಿಕಾರಿಗಳು, ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕರಾದ ಗೋಕುಲ್‌ನಾಥ್ ಪಿ. ವಿ., ಉಪನ್ಯಾಸ ವೃಂದ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮುಖ್ಯೋಪಾದ್ಯಯಿನಿ ಪ್ರಮೀಳಾ ಎನ್. ಡಿ. ಇವರು ಸ್ವಾಗತಿಸಿ, ವ್ಯವಹಾರ ಅಧ್ಯಯನ ಉಪನ್ಯಾಸಕಿ ಹರ್ಷಿತ, ರೈ ಕಾರ‍್ಯಕ್ರಮವನ್ನು ನಿರೂಪಿಸಿ, ಗಣಿತ ಉಪನ್ಯಾಸಕಿ ಮಧುಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here