





ಅಧ್ಯಕ್ಷ: ಶಿವರಾಮ ಶೆಟ್ಟಿ ಕೇಪು, ಪ್ರಧಾನ ಕಾರ್ಯದರ್ಶಿ; ಗಿರಿಶಂಕರ ಸುಲಾಯ, ಸಂಚಾಲಕ; ಉಮೇಶ್ ಶೆಟ್ಟಿ ಸಾಯಿರಾಂ


ರಾಮಕುಂಜ: ನೇತ್ರಾವತಿ ತುಳುಕೂಟ ರಾಮಕುಂಜ ಇವರ ನೇತೃತ್ವದಲ್ಲಿ ತೆಗ್ರ್ ತುಳುಕೂಟ ನೂಜಿಬಾಳ್ತಿಲ ಇವರ ಆಶ್ರಯದಲ್ಲಿ ಡಿ.21ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದಲ್ಲಿ ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಸ್ವಾಗತ ಸಮಿತಿ ರಚನೆ ಮಾಡಲಾಯಿತು.






ಅಧ್ಯಕ್ಷರಾಗಿ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಪ್ರಧಾನ ಕಾರ್ಯದರ್ಶಿಯಾಗಿ ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ ಹಾಗೂ ಸಂಚಾಲಕರಾಗಿ ನೂಜಿಬಾಳ್ತಿಲ ತೆಗ್ರ್ ತುಳುಕೂಟದ ಉಮೇಶ್ ಶೆಟ್ಟಿ ಸಾಯಿರಾಂ ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ರಾಜರ್ಷಿ ಡಾ|ಡಿ.ವೀರೇಂದ್ರ ಹೆಗ್ಗಡೆ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ರೆಂಜಿಲಾಡಿ ಬೀಡು ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಗೌರವಾಧ್ಯಕ್ಷರಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜಯಸೂರ್ಯ ರೈ ಮಾದೋಡಿ, ಲಕ್ಷ್ಮಣ ಗೌಡ ಕರಂದ್ಲಾಜೆ, ಕೇಶವ ಅಮೈ ಕಲಾಯಿಗುತ್ತು, ಜನಾರ್ದನ ಗೌಡ ಪಣೆಮಜಲು, ಪುಲಸ್ತ್ಯ ರೈ ಕುಟ್ರುಪ್ಪಾಡಿ, ಕಾರ್ಯದರ್ಶಿಗಳಾಗಿ ಸರಿತಾಜನಾರ್ದನ, ಸುರೇಶ್ ದೇಂತಾರು, ದಯಾನಂದ ಪುರಿಯ, ಹರೀಶ್ ಬಾರಿಂಜ, ಪ್ರೇಮ ರಾಮಕುಂಜ, ಕೋಶಾಧಿಕಾರಿಗಳಾಗಿ ವಾಸುದೇವ ಗೌಡ ಕೇಪುಂಜ, ರಮ್ಯಾ ರಾಮಕುಂಜ ಆಯ್ಕೆಯಾದರು.





