ಸವಣೂರಿನಲ್ಲಿ ಕೋಡಿಬೈಲು ಕೋಳಿ ಪ್ರಪಂಚ ಉದ್ಘಾಟನೆ

0

ಯುವ ಸಮುದಾಯ ಸ್ವ-ಉದ್ಯೋಗ ಮಾಡಬೇಕು- ಆರಿಕೋಡಿ ಶ್ರೀ


ಪುತ್ತೂರು: ಯುವ ಸಮುದಾಯ ಕೇವಲ ಸರಕಾರಿ ಅಥವಾ ಖಾಸಗಿ ಉದ್ಯೋಗವನ್ನು ಬಯಸದೇ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಉದ್ದೇಶದಿಂದ ಸ್ವ-ಉದ್ಯೋಗವನ್ನು ಮಾಡಬೇಕು ಎಂದು ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಹೇಳಿದರು.


ಅವರು ಜ. 25 ರಂದು ಸವಣೂರಿನ ಯುವ ಸಂಘಟಕ ಕೀರ್ತನ್ ಕೋಡಿಬೈಲುರವರ ಮಾಲಕತ್ವದ ಕೋಡಿಬೈಲು ಕೋಳಿ ಪ್ರಪಂಚ ಸಂಸ್ಥೆಯನ್ನು ಸವಣೂರಿನ ಹೃದಯ ಭಾಗದಲ್ಲಿ ಇರುವ ಕಾರ್ತಿಕೇಯ ಕಾಂಪ್ಲೆಕ್ಸ್‌ನಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಯುವ ಮುಂದಾಳು ಕೀರ್ತನ್ ಕೋಡಿಬೈಲುರವರ ಸಂಸ್ಥೆ ಈ ಭಾಗದಲ್ಲಿ ಉತ್ತಮ ಸೇವೆಯನ್ನು ನೀಡುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಲಿ ಎಂದು ಶುಭಹಾರೈಸಿದರು.


ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕಾರ‍್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ.ಎ, ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾರ್ತಿಕೇಯ ಕಾಂಪ್ಲೆಕ್ಸ್ ಮಾಲಕಿ ಜಲಜಾಕ್ಷಿ ನಾರಾಯಣ ಗೌಡ ಬಂಬಿಲ, ಕಾರ್ತಿಕೇಯ ಫ್ಯಾನ್ಸಿ ಮಾಲಕ ಚಿದಾನಂದ ಬಂಬಿಲ ಸೇರಿದಂತೆ ಗ್ರಾ.ಪಂ, ಸಹಕಾರ ಸಂಘದ ಸದಸ್ಯರುಗಳು ಊರ-ಪರವೂರ ಹಿತೈಷಿಗಳು, ಸವಣೂರು ಯುವಕ ಮಂಡಲ, ಅಂಬಾ ಬ್ರದರ‍್ಸ್, ಬೊಳ್ಳಿ ಬೊಲ್ಪು ತುಳುಕೂಟದ ಸದಸ್ಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ, ಸಂಸ್ಥೆಗೆ ಶುಭಹಾರೈಸಿದರು. ಮಾಲಕ ಕೀರ್ತನ್ ಕೋಡಿಬೈಲು ಹಾಗೂ ಅವರ ಮನೆಯವರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here