ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನು ಸರ್ವೆ ನಂಬ್ರ 88 ವಿಸ್ತೀರ್ಣ 92 ಸೆಂಟ್ಸ್ನ ಸರ್ವೇಕ್ಷಣೆ, ಗಡಿ ಗುರುತಿಸುವಿಕೆ ಮತ್ತು ಒತ್ತುವರಿ ನಿಗದಿ ಪಡಿಸುವ,ಜಂಟಿ ಸರ್ವೇಕ್ಷಣೆಯ ಕಾರ್ಯ ಭೂಮಾಪನ ಹಾಗೂ ಸರ್ವೇಕ್ಷಣೆ ಇಲಾಖಾ ವತಿಯಿಂದ ಜ.25ರಂದು ಬೆಳಿಗ್ಗೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಭೂಮಾಪನಾ ಇಲಾಖೆಯ ಅಧಿಕಾರಿಗಳು ಸಹಿತ ಭೂ ಮಾಲೀಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜಂಟಿ ಸರ್ವೆ ಕಾರ್ಯ ನಡೆಸಲಾಯಿತು.ಆರು ತಿಂಗಳ ಹಿಂದೆಯೂ ಇದೇ ಜಾಗದಲ್ಲಿ ದೇವಳದ ವತಿಯಿಂದ ಸರ್ವೆ ಕಾರ್ಯ ನಡೆಸಿದಾಗ 92 ಸೆಂಟ್ಸ್ ಜಾಗ ಗುರುತಿಸಲಾಗಿತ್ತು.ಇದೀಗ ಜಂಟಿ ಸರ್ವೆಯಲ್ಲೂ 92 ಸೆಂಟ್ಸ್ ಜಾಗ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಳದ ಕಾರ್ಯನಿರ್ವಹಣಾಽಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಭೂ ಮಾಲಕರುಗಳು ಉಪಸ್ಥಿತರಿದ್ದರು.