ಪುತ್ತೂರು: ಸೂತ್ರಬೆಟ್ಟು ನಿವಾಸಿ, ದಿ.ಪೀಟರ್ ರೆಬೆಲ್ಲೋ ಹಾಗೂ ದಿ.ಮೇರಿ ರೆಬೆಲ್ಲೋರವರ ಪುತ್ರ ರಿಕ್ಷಾ ಚಾಲಕ ವಾಲ್ಟರ್ ರೆಬೆಲ್ಲೋ(71) ಅವರು ಅನಾರೋಗ್ಯದಿಂದ ವಾಮಂಜೂರು ಆಸ್ಪತ್ರೆಯಲ್ಲಿ ಜ.28 ರಂದು ನಿಧನರಾದರು.
ಮೃತ ವಾಲ್ಟರ್ ರೆಬೆಲ್ಲೋರವರು ಆದರ್ಶ ಆಸ್ಪತ್ರೆ ಎದುರಿನ ರಿಕ್ಷಾ ಕ್ಯೂನಲ್ಲಿ ಕಳೆದ ಸುಮಾರು 45 ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಹಾಸ್ಯ ಚಟಾಕಿ ಮೂಲಕ ಎಲ್ಲರನ್ನು ನಗಿಸುತ್ತಿದ್ದ ವಾಲ್ಟರ್ ರೆಬೆಲ್ಲೋರವರು ಮಾಯಿದೆ ದೇವುಸ್ ಚರ್ಚ್ ನ ಕಥೋಲಿಕ್ ಸಭಾದ ಸಕ್ರಿಯ ಸದಸ್ಯರಾಗಿದ್ದರು. ಮೃತರು ಸಹೋದರ ಗಾಯಕ ಚಾರ್ಲ್ಸ್ ರೆಬೆಲ್ಲೋ, ಸಹೋದರಿಯರಾದ ಫಿಲೋಮಿನಾ, ಆಲಿಸ್, ಲಿಲ್ಲಿರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜ.29 ರಂದು ಅಪರಾಹ್ನ 3.30 ಗಂಟೆಗೆ ಏಳ್ಮುಡಿ ಸಿಮೆತರಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.