ಪುತ್ತೂರು: 31ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟ ಯಶಸ್ವಿಯಾಗಿ ನಡೆದಿದೆ. ಸಾವಿರಾರು ಮಂದಿ ಈ ಕಂಬಳ ಕೂಟದಲ್ಲಿ ಭಾಗವಹಿಸಿದ್ದು, ಕಂಬಳದ ಯಶಸ್ವಿಗೆ ಸಾಕ್ಷಿಯಾದರು. ಜ.27, 28ರಂದು ನಡೆದ ಕಂಬಳದಲ್ಲಿ ಸುಮಾರು 187 ಜೋಡಿ ಕೋಣಗಳು ಭಾಗವಹಿಸಿದ್ದವು. ಕಂಬಳ ಕೂಟದಲ್ಲಿ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಕೋಣದ ಮಾಲಕರು ಮತ್ತು ಓಟಗಾರರನ್ನು ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ರಾಜ ಮಹಾರಾಜ ಕಂಬಳದ ರೂವಾರಿ ಅಶೋಕ್ ಕುಮಾರ್ ರೈ ಅವರನ್ನು ಕೂಟದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಯಶಸ್ವಿಯಾಗಿ ನಡೆದ ಕಂಬಳ ಕೂಟದ ಫಲಿತಾoಶ ಇಂತಿದೆ.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 06 ಜೊತೆ
ಅಡ್ಡಹಲಗೆ: 04 ಜೊತೆ
ಹಗ್ಗ ಹಿರಿಯ: 15 ಜೊತೆ
ನೇಗಿಲು ಹಿರಿಯ: 40 ಜೊತೆ
ಹಗ್ಗ ಕಿರಿಯ: 25 ಜೊತೆ
ನೇಗಿಲು ಕಿರಿಯ: 97 ಜೊತೆ
ಒಟ್ಟು ಕೋಣಗಳ ಸಂಖ್ಯೆ: 187 ಜೊತೆ
•••••••••••••••••••••••••••••••••••••••••••••
ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದವರು )
ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
•••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
•••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ”
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ “ಬಿ”
ಓಡಿಸಿದವರು: ಬಾರಾಡಿ ನತೀಶ್
•••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ “ಬಿ”
ಓಡಿಸಿದವರು: ಭಟ್ಕಳ ಶಂಕರ್
ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ “ಬಿ”
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
•••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ “ಎ”
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ
ಓಡಿಸಿದವರು: ಮಾಳ ಆಧೀಶ್ ಪೂಜಾರಿ
•••••••••••••••••••••••••••••••••••••••••••••
ನೇಗಿಲು ಕಿರಿಯ:
( ಸಮಾನ ಬಹುಮಾನ )
ಮುನಿಯಾಲ್ ಉದಯ ಕುಮಾರ್ ಶೆಟ್ಟಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ಉಡುಪಿ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ “ಬಿ”
ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ
••••••••••••••••••••••••••••••••••••••••••••••