ಮಂಡ್ಯದ ಕರೆಗೋಡುವಿನಲ್ಲಿ ಹನುಮಧ್ವಜ ಇಳಿಕೆ ಹಿನ್ನೆಲೆ – ಘಟನೆಯನ್ನು ಖಂಡಿಸಿದ ಭಜರಂಗದಳ – ಇಂದು(ಜ.29) ಕರೆಗೋಡುವಿನಲ್ಲಿ ಮನೆ ಮನೆ ಭಗವಾಧ್ವಜ

0

ಪುತ್ತೂರು: ಶ್ರೀ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕರೆಗೋಡು ಹೋಬಳಿಯಲ್ಲಿ ಎಲ್ಲಾ ಜನರ ಪರವಾಗಿ ಹಾರಿಸಿದ ಹನುಮ ಧ್ವಜವನ್ನು ಸಾವಿರಾರು ಜನರ ವಿರೋಧದ ನಡುವೆಯೂ ಸರಕಾರಿ ಪ್ರೇರಿತವಾಗಿ ಇಳಿಸಿದಂತಹ ಘಟನೆ ಅತ್ಯಂತ ದುರದೃಷ್ಟಕರ. ಹಿಂದೂ ಸಮಾಜದ ಭಾವನೆಗಳಿಗೆ, ನಂಬಿಕೆಗಳಿಗೆ ಯಾವುದೇ ಬೆಲೆ ಕೊಡದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಹೇಳಿರುವ ಪುತ್ತೂರು ಭಜರಂಗದಳ ಘಟನೆಯನ್ನು ಖಂಡಿಸಿದೆ.


ಜ.29ಕ್ಕೆ ಮಂಡ್ಯದ ಕರೆಗೋಡು ಹೋಬಳಿಯಲ್ಲಿ ಮನೆಗಳಲ್ಲಿ ಭಗವಾಧ್ವಜವನ್ನು ಜಾತಿ, ಪಕ್ಷ ಮರೆತು ಹಾರಿಸಿ ಹಿಂದೂ ವಿರೋಧಿ ಸರಕಾರಕ್ಕೆ ಸರಿಯಾದ ಉತ್ತರವನ್ನು ನೀಡಲಿದ್ದೇವೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here