ಪುತ್ತೂರು: ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆಯು ಜ.23ರಂದು ಕೋಡಿಂಬಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೋಡಿಂಬಾಡಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಅಶೋಕ ಪೂಜಾರಿ ಮಾತನಾಡಿ, ಸಂಜೀವಿನಿ ಒಕ್ಕೂಟದೊಂದಿಗೆ ಬೆರೆತು ಸಂತೋಷ ತಂದಿದೆ ಇನ್ನು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟವು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಜೆ ಅಂಗನವಾಡಿ ಕೇಂದ್ರ ನಿವೃತ್ತ ಕಾರ್ಯಕರ್ತೆ ಯಶೋಧರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕೋಡಿಂಬಾಡಿ ಗ್ರಾ. ಪಂ. ಸದಸ್ಯರಾದ ಉಷಾ ಮತ್ತು ಮೋಹಿನಿ, ಒಕ್ಕೂಟದ ಪದಾಧಿಕಾರಿಗಳಾದ ಸೌಮ್ಯ, ಯಮುನಾ, ಪೂರ್ಣಿಮ, ನಳಿನಿ, ಕೃಷಿಸಖಿ ಕವಿತಾ, ಕೃಷಿ ಉದ್ಯೋಗ ಸಖಿ ತುಳಸಿ, ಎಲ್ಸಿಆರ್ಪಿ ಭವಾನಿ ಕೋಡಿಂಬಾಡಿ, ಕಾವ್ಯ ಬೆಳ್ಳಿಪಾಡಿ, ವಲಯ ಮೇಲ್ವಿಚಾರಕಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ:
ಮಹಾಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ನೂತನ ಅಧ್ಯಕ್ಷರಾಗಿ ಚಿತ್ರ ಕಜೆ, ಉಪಾಧ್ಯಕ್ಷರಾಗಿ ವೀಣಾ ಬೆಳ್ಳಿಪಾಡಿ, ಕಾರ್ಯದರ್ಶಿಯಾಗಿ ಶ್ವೇತ .ಪಿ ಶಾಂತಿನಗರ, ಉಪಕಾರ್ಯದರ್ಶಿಯಾಗಿ ಭವ್ಯ ಕೊಡಿಂಬಾಡಿ, ಕೋಶಾಧಿಕಾರಿಯಾಗಿ ದಿವ್ಯ ಕೊಡಿಮರ, ಪದಾಧಿಕಾರಿಗಳಾಗಿ ಪವಿತ್ರ ಕೊಡಿಮರ, ಭಾರತಿ ಕೊಡಿಮರ, ರಾಜೀವಿ ಬೆಳ್ಳಿಪಾಡಿ, ಅನುಪಮ ಕಜೆ, ಉಪಸಮಿತಿಗೆ ಪ್ರಿಯ ಶಾಂತಿನಗರ, ಸೌಮ್ಯ ಶಾಂತಿನಗರ, ಸಂಧ್ಯಾ ಕೊಡಿಮರ, ಸುಂದರಿ ಕಜೆ, ಸೌಮ್ಯ ಕೃಷ್ಣಗಿರಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಿಯಾ ಪ್ರಾರ್ಥಿಸಿದರು. ಪಶುಸಖಿ ಭವ್ಯ .ವಿ ಕಾರ್ಯಕ್ರಮ ನಿರೂಪಿಸಿದರು. ಎಫ್ಎಲ್ಆರ್ಸಿಪಿ ವೇದಾವತಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಸುಂದರಿ ಪಿ. ವರದಿ ಮಂಡಿಸಿದರು. ಮುಖ್ಯ ಪುಸ್ತಕ ಬರಹಗಾರ್ತಿ ಸಂಧ್ಯಾ .ಕೆ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ವೀಕ್ಷಾ ಬೆಳ್ಳಿಪಾಡಿ ಇವರು ವಂದಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಗ್ರಂಥಾಲಯ ಮೇಲ್ವಿಚಾರಕಿ, ಪುನಶ್ವೇತನ ಕಾರ್ಯಕರ್ತೆ ಹಾಗೂ ವಿಕಲಚೇತನ ಸಂಘದ ಸದಸ್ಯರುಗಳು ಸಭೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೆರೆಟೆ ಮತ್ತು ಬಟ್ಟೆ ಸ್ಟಾಲ್ಗಳನ್ನು ಮಹಾಸಭೆಯಲ್ಲಿದ್ದವು.