ನೆಲ್ಯಾಡಿ ಜೆಸಿಐ 2024ನೇ ಸಾಲಿನ ಘಟಕಾಡಳಿತ ಮಂಡಳಿ ಪದಗ್ರಹಣ

0

ಸ್ವಾಸ್ಥ್ಯ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ: ಪುರಂದರ ರೈ ಮಿತ್ರಂಪಾಡಿ

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ 2024ನೇ ಘಟಕಾಡಳಿತ ಮಂಡಳಿಯ ಹಾಗೂ ನೆಲ್ಯಾಡಿ ಜೆಸಿಐನ 41ನೇ ಅಧ್ಯಕ್ಷೆ ಸುಚಿತ್ರಾ ಜೆ ಬಂಟ್ರಿಯಲ್ ಮತ್ತು ತಂಡದ ಪದಗ್ರಹಣ ಸಮಾರಂಭ ಜ.29ರಂದು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಪುರಂದರ ರೈ ಮಿತ್ರಂಪಾಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯರ ಅನುಭವ, ತಿಳುವಳಿಕೆ, ನಡತೆಗಳನ್ನು ಅಳವಡಿಸಿಕೊಂಡು ಯುವಕರು ಜೆಸಿಐ ಸಂಸ್ಥೆಗಳಿಗೆ ಸೇರಿಕೊಳ್ಳಬೇಕು. ತರಬೇತಿಯೇ ಜೆಸಿಐ ಅಸ್ಮಿತೆಯಾಗಿದೆ. ಜಾಗತಿಕ ಶಾಂತಿಗಾಗಿ ಸಚ್ಚಾರಿತ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಇದಕ್ಕಾಗಿ ಯುವಕರು ಜೆಸಿಐಗೆ ಸೇರಿಕೊಳ್ಳಬೇಕು ಎಂದು ಹೇಳಿದ ಅವರು, 50ನೇ ವರ್ಷದತ್ತ ಸಾಗುತ್ತಿರುವ ನೆಲ್ಯಾಡಿ ಜೆಸಿಐ ಸದಸ್ಯನೊಬ್ಬ ವಲಯಾಧ್ಯಕ್ಷ ಆಗಬೇಕು. ಇದಕ್ಕಾಗಿ ಯುವಕರನ್ನು ಹೆಚ್ಚಿನ ಪ್ರಮಾಣದಲ್ಲಿ ಜೆಸಿಐ ಸೇರಿಸಿಕೊಳ್ಳಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಜೆಸಿಐ ಪ್ರಾಂತ್ಯ ಬಿ ವಲಯ 15ರ ಉಪಾಧ್ಯಕ್ಷರಾದ ಶಂಕರ ರಾವ್ ಅವರು ಮಾತನಾಡಿ, ದೇಶದಲ್ಲಿ 1949ರಲ್ಲಿ ಆರಂಭಗೊಂಡಿರುವ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಜೆಸಿಐಗೆ ಪ್ರಸ್ತುತ 75ನೇ ವರ್ಷದ ಸಂಭ್ರಮವಾಗಿರುವುದರಿಂದ ಪ್ರಸ್ತುತ ವರ್ಷ ತರಬೇತಿ ವಿಭಾಗವನ್ನು ಉತ್ತುಂಗಕ್ಕೇರಿಸಲು ಚಿಂತನೆ ನಡೆದಿದೆ. ಅಲ್ಲದೇ ಪ್ರಸ್ತುತ ವರ್ಷ ಆಂಧ್ರಪ್ರದೇಶದ ಕಬಿನ್‌ಕುಮಾರವೇಲು ಅವರು ಜೆಸಿಐನ ಅಂತರಾಷ್ಟ್ರೀಯ ಅಧ್ಯಕ್ಷರಾಗಿರುವುದು ಭಾರತೀಯರಿಗೆ ಹೆಮ್ಮೆ ಎಂದರು. ನೆಲ್ಯಾಡಿ ಸಂತಚಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಸಂಚಾಲಕರಾದ ರೆ.ಫಾ.ನೋಮೀಸ್ ಪಿ.ಕುರಿಯಕೋಸ್, ನಿಕಟಪೂರ್ವಾಧ್ಯಕ್ಷೆ ಜಯಂತಿ ಬಿ.ಎಂ.ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಪೂರ್ವಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ೨೦೨೩ನೇ ಸಾಲಿನ ಘಟಕಾಡಳಿತ ಮಂಡಳಿ ಅಧ್ಯಕ್ಷ ದಯಾಕರ ರೈಯವರು 2023ನೇ ಸಾಲಿನ ಚಟುವಟಿಕೆಗಳ ವರದಿ ಮಂಡಿಸಿ, 1 ವರ್ಷದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಘಟಕದ ಪೂರ್ವಾಧ್ಯಕ್ಷರಿಗೆ ಹಾಗೂ 2023ನೇ ಸಾಲಿನ ಘಟಕ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉತ್ತರಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು, ಪೂರ್ವಾಧ್ಯಕ್ಷರ ಸಹಕಾರ, ಮಾರ್ಗದರ್ಶನದೊಂದಿಗೆ ಮುಂದಿನ 1 ವರ್ಷದ ಅವಧಿಯಲ್ಲಿ ಉತ್ತಮ ಕಾರ್ಯಕ್ರಮ ಸಂಘಟಿಸುವ ಮೂಲಕ ನೆಲ್ಯಾಡಿ ಜೆಸಿಐ ನನ್ನಿಂದಾಗುವ ನ್ಯಾಯ ಒದಗಿಸಲು ಬದ್ಧ ಎಂದು ಹೇಳಿದರು.

ಪದಗ್ರಹಣ:
2024ನೇ ಸಾಲಿನ ನೂತನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರಿಗೆ ನಿರ್ಗಮನ ಅಧ್ಯಕ್ಷ ದಯಾಕರ ರೈ ಕೆ.ಎಂ.ಅವರು ಪ್ರಮಾಣವಚನ ಬೋಧಿಸಿ ಪಿನ್ ತೊಡಿಸಿ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಕಾರ್ಯದರ್ಶಿ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ನೂತನ ಕಾರ್ಯದರ್ಶಿ ಆನಂದ ಅಜಿಲ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಜೇಸಿರೇಟ್ ಅಧ್ಯಕ್ಷೆ ಜೇಸಿ ರಶ್ಮಾ ರೈ ಅವರು ನೂತನ ಜೇಸಿರೇಟ್ ಅಧ್ಯಕ್ಷೆ ಎನ್.ಲೀಲಾ ಮೋಹನ್ ಹಾಗೂ ಜೆಜೆಸಿ ಅಧ್ಯಕ್ಷ ಗೌರವ್ ಅವರು ನೂತನವಾಗಿ ಆಯ್ಕೆಯಾದ ಜೆಜೆಸಿ ಅಧ್ಯಕ್ಷರಾದ ಶಮಂತ್, ವೈಷ್ಣವಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನೂತನವಾಗಿ ಆಯ್ಕೆಯಾದ ಘಟಕ ಆಡಳಿತ ಮಂಡಳಿ ಸದಸ್ಯರಿಗೆ ಅಧ್ಯಕ್ಷೆ ಸುಚಿತ್ರಾ ಜೆ. ಬಂಟ್ರಿಯಾಲ್ ಅವರು ಪ್ರಮಾಣ ವಚನ ಬೋಧಿಸಿದರು.

ಸದಸ್ಯರ ಸೇರ್ಪಡೆ:
ನೆಲ್ಯಾಡಿ ಜೆಸಿಐ ಘಟಕಕ್ಕೆ ಸತೀಶ್ ಕೆ.ಎಸ್ ದುರ್ಗಾಶ್ರೀ, ಅನುಪಮ್, ಗೌರವ್ ಜಿ.ಕೆ., ಜೋಸೆಫ್ ಶರೂನ್, ಸುರಕ್ಷಾ ಶೆಟ್ಟಿಯವರು ಸೇರ್ಪಡೆಗೊಂಡರು. ಗಣೇಶ್ ರಶ್ಮಿ, ವಿನ್ಯಾಸ್ ಬಂಟ್ರಿಯಾಲ್, ಮೋಹನ್‌ಕುಮಾರ್, ನವ್ಯಾಪ್ರಸಾದ್ ಅವರು ಹೊಸ ಸದಸ್ಯರನ್ನು ಪರಿಚಯಿಸಿದರು. ಪುರಂದರ ರೈ ಮಿತ್ರಂಪಾಡಿ ಅವರು ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಸನ್ಮಾನ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ, ಪ್ರಶಾಂತ್ ಸಿ.ಎಚ್, ಅಬ್ರಹಾಂ ವರ್ಗೀಸ್, ನಿಕಟ ಪೂರ್ವಾಧ್ಯಕ್ಷೆ ಜಯಂತಿ ಬಿ.ಎಂ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ೨೦೨೩ನೇ ಸಾಲಿನಲ್ಲಿ ಉತ್ತಮ ಕಾರ್ಯಕ್ರಮ ಸಂಘಟಿಸಿರುವುದಕ್ಕೆ ದಯಾಕರ ರೈ ಕೆ.ಎಂ.ಅವರನ್ನು ಜೆಸಿಐ ವತಿಯಿಂದ ಸನ್ಮಾನಿಸಲಾಯಿತು.

ಯೋಜನಾ ನಿರ್ದೇಶಕ ಪುರಂದರ ಗೌಡ ಡೆಂಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಜಾನ್ ಪಿ.ಎಸ್., ಶಿವಪ್ರಸಾದ್ ಅವರು ಅತಿಥಿಗಳನ್ನು ಪರಿಚಯಿಸಿದರು. ನಾರಾಯಣ ಎನ್.ಬಲ್ಯ, ಇಸ್ಮಾಯಿಲ್ ಕೆ., ರಶ್ಮಾ ರೈ, ಗೌರವ್ ಅವರು ನೂತನ ಅಧ್ಯಕ್ಷ, ಪದಾಧಿಕಾರಿಗಳನ್ನು ಪರಿಚಯಿಸಿದರು. ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಡಾ.ಸದಾನಂದ ಕುಂದರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜಾಹ್ನವಿ ಜೇಸಿವಾಣಿ ವಾಚಿಸಿದರು. ನಿಕಟಪೂರ್ವಾಧ್ಯಕ್ಷ ದಯಾಕರ ರೈ ಕೆ.ಯಂ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಆನಂದ ಅಜಿಲ ವಂದಿಸಿದರು.

LEAVE A REPLY

Please enter your comment!
Please enter your name here