ಮಾಡನ್ನೂರು ಮಖಾಂ ಉರೂಸ್ ಪ್ರಾರಂಭ

0

ಕೌಡಿಚ್ಚಾರ್: ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಝಿಯಾರತ್ ಕೇಂದ್ರವೆಂದೇ ಗುರುತಿಸಲ್ಪಡುವ, ರೋಗಿಗಳ ಮತ್ತು ನೊಂದವರ ಆಶಾ ಕೇಂದ್ರವಾಗಿರುವ ಮಾಡನ್ನೂರು ಮುಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಅಲ್ ವಲಿಯ್ಯಶಾಹೀದ್ (ಫೀ ಸಬೀರ್ ರ.ಅ) ರವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕೊಮ್ಮೆ ನಡೆಸುತ್ತಿರುವ ಮಾಡನ್ನೂರು ಮುಖಾಂ ಉರೂಸ್ ಸಮಾರಂಭವು ಫೆ.4 ರಂದು ದರ್ಗಾಕ್ಕೆ ಚದಾರ ಹೊದಿಸಿ (ಹಾಕಿ) ಮಖಾಂ ಝಿಯಾರತಿನೊಂದಿಗೆ ಆರಂಭಗೊಂಡಿತು. ಮಖಾಂ ಝಿಯಾರನ್ನು ಜಮಾಅತ್ ಖತೀಬರಾದ ಜನಾಬ್ ಇಸ್ಮಾಯಿಲ್ ಫಾಝಿಯವರು ನೆರವೇರಿಸಿದರು. ಮಾಡನ್ನೂರು ಜಮಾಅತ್ ಅಧ್ಯಕ್ಷರಾದ ಎ. ಇಸ್ಮಾಯಿಲ್ ಹಾಜಿಯವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುಶ್ರ ಅಬ್ದುಲ್ ಅಜೀಜ್ ವಹಿಸಿದರು.


ಕಾರ್ಯಕ್ರಮದಲ್ಲಿ ಸಿ.ಎಚ್ ಅಬ್ದುಲ್ಲ ಅಜೀಜ್, ಸಿ.ಚ್. ಅಬ್ದುಲ್ಲಾ, ಬಿ.ಎಂ ಖಾಲಿದ್, ಮಹಮೂದ್ ಮುಸ್ಲಿಯಾರ್ ಎಂ.ಎ, . ಇಸ್ಮಾಯಿಲ್ ಶಾಫಿ, ಕೆ.ಕೆ ಇಬ್ರಾಹಿಂ ಹಾಜಿ, ಬಿ.ಎಂ ಅಬ್ದುಲ್ಲ, ನೂರುಲ್‌ಹುದಾ ಅರ್ಶದಿ, ಎಂ. ಇಬ್ರಾಹಿಂ ಅರೆಯಲಡಿ, ಸಿ ಕೆ ಹಸೈನಾರ್, ಅಬ್ದುಲ್ಲ ಕುಂಞ ಇರ್ದೆ, ಅಬ್ದುಲ್ಲ ಅರ್ಶದಿ, ಎನ್.ಪಿ ಮೂಸ, ಸಿ.ಕೆ ಹಸೈನಾರ್, ಎಂ.ಡಿ ಹಸೈನಾರ್ ಹಾಜಿ, ಮಹಮ್ಮದ್ ಕುಂಞ ಹಾಜಿ ಕಾವು ಮತ್ತು ಜಮಅತರು ಭಾಗವಹಿಸಿದ್ದರು. ಜಮಅತ್ ಕಾರ್ಯದರ್ಶಿ ಎಂ.ಡಿ ಹಸೈನಾರ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here