ಗಾಲಿ ಕುರ್ಚಿ ಅವಲಂಬಿತರಿಗಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರ‍್ಯಾಂಪ್ ಅಳವಡಿಕೆ -11 ವರ್ಷಗಳ ಬಳಿಕ ಗಾಲಿ ಕುರ್ಚಿಯಲ್ಲಿ ದೇವಳ ಪ್ರವೇಶಿಸಿದ ಆದಿತ್ಯ ಕಲ್ಲೂರಾಯ

0

ಪುತ್ತೂರು: ಗಾಲಿ ಕುರ್ಚಿ ಅವಲಂಬಿತರಿಗಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ಪ್ರವೇಶಿಸಲು ನೂತನ ರ‍್ಯಾಂಪ್ ಸೌಲಭ್ಯ ಲೋಕಾರ್ಪಣೆ ಕಾರ್ಯಕ್ರಮ ಫೆ.5 ರಂದು ನಡೆಯಿತು. ವಿಶೇಷವಾಗಿ ಇಲ್ಲಿನ ತನಕ ರ‍್ಯಾಂಪ್ ಇಲ್ಲದೆ ದೇವಳದ ಒಳಪ್ರವೇಶಿಸಲು ಆಗದಿದ್ದ ಕಾಲಿನ ಶಕ್ತಿ ಕಳೆದು ಕೊಂಡಿರುವ ವೆಬ್ ಪೀಪಲ್‌ನ ಆದಿತ್ಯ ಕಲ್ಲೂರಾಯ ಅವರು 11 ವರ್ಷಗಳ ಬಳಿಕ ನೂತನ ರ‍್ಯಾಂಪ್ ಮೂಲಕ ಗಾಲಿ ಕುರ್ಚಿಯಲ್ಲಿ ದೇವಳವನ್ನು ಪ್ರವೇಶಿಸುವ ಮೂಲಕ ನೂತನ ರ‍್ಯಾಂಪ್ ಅನ್ನು ಉದ್ಘಾಟಿಸಿದರು.


ದೇವಳದ ಉತ್ತರ ಭಾಗದಿಂದ ಈ ರ‍್ಯಾಂಪ್ ಅಳವಡಿಸಲಾಗಿದ್ದು, ಗಾಲಿ ಕುರ್ಚಿ ಅವಲಂಭಿತರು ಈ ಭಾಗದಿಂದ ದೇವಳವನ್ನು ಪ್ರವೇಶಿಸಬಹುದು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ಬಿ.ಕೆ.ವೀಣಾ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ವೆಬ್ ಪಿಪಲ್‌ನ ಶರತ್, ಸೂರಜ್ ನಾಯರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಹಿರಿಯರಿಗೂ ಪ್ರಯೋಜನ:
ದೇವಸ್ಥಾನದಲ್ಲಿ ರ‍್ಯಾಂಪ್ ಅಗತ್ಯವಿರುವ ಕುರಿತು ವೆಬ್ ಪಿಪಲ್‌ನ ಆದಿತ್ಯ ಕಲ್ಲೂರಾಯ ಅವರ ಮನದಾಳದಿಂದ ಬಂದಿತ್ತು. ಅದೇ ರೀತಿ ಹಿರಿಯ ಮಹಿಳೆಯೊಬ್ಬರು ಕೂಡಾ ದೇವಳದ ಮೆಟ್ಟಿಲು ಏರುವು ಕಷ್ಟವನ್ನು ನೋಡಿದ ನಮಗೆ ಗಾಲಿ ಕುರ್ಚಿಯಲ್ಲಿ ಬರುವವರಿಗೆ ಮತ್ತು ಹಿರಿಯರಿಗೆ ಅನುಕೂಲವಾಗುವಂತೆ ರ‍್ಯಾಂಪ್ ಅಳವಡಿಸಲಾಗಿದೆ. ವೆಬ್ ಪಿಪಲ್‌ನವರು ದೇವಳದ ಪೇಸ್ ಬುಕ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಸ್ಟ್ರಾಗ್ರಾಂ ಪೇಜ್ ಅನ್ನು ಸೇವಾ ರೂಪದಲ್ಲಿ ನಿರ್ವಹಿಸುತ್ತಿದ್ದಾರೆ.
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

ಅಪಘಾತದಿಂದಾಗಿ ಕಾಲಿನ ಶಕ್ತಿ ಕಳೆದು ಕೊಂಡ ನನಗೆ ಇದೀಗ 12 ವರ್ಷದ ಬಳಿಕ ದೇವಳವನ್ನು ಪ್ರವೇಶಿಸುವ ಅವಕಾಶ ಸಿಕ್ಕಿದೆ. ನಡೆಯಲು ಅಶಕ್ತವಾದ್ದರಿಂದ ಗಾಲಿ ಕುರ್ಚಿಯನ್ನು ಬಳಸಿಕೊಂಡು ದೇವಳದ ಮೆಟ್ಟಲು ಏರುವುದು ಕಷ್ಟ. ಈ ನಿಟ್ಟಿನಲ್ಲಿ ಹೊರಗಡೆ ಕಾರಿನಲ್ಲೇ ಕೂತು ಕೈ ಮುಗಿದು ಹೋಗುತ್ತಿದ್ದೆ. ದೇವಸ್ಥಾನದ ಒಳಗೆ ಬರಲು ನೀನೇ ಕರೆದು ಕೊಂಡು ಬರಬೇಕೆಂದು ಪ್ರಾರ್ಥಿಸಿದ್ದೆ. ಅದೇ ರೀತಿ ಆ ಕೇಳಿಕೆ ಇವತ್ತು ಈಡೇರಿದೆ. ದೇವಳದ ಸಮಿತಿಯವರು ನಿರ್ಮಾಣ ಮಾಡಿಕೊಟ್ಟ ನೂತನ ರ‍್ಯಾಂಪ್ ಮೂಲಕ ದೇವಳವನ್ನು ಪ್ರವೇಶಿಸಿ ದೇವರ ದರುಶನ ಪಡೆದಿದ್ದೇನೆ
ಆದಿತ್ಯ ಕಲ್ಲೂರಾಯ, ದಿ ವೆಬ್‌ಪಿಪಲ್

LEAVE A REPLY

Please enter your comment!
Please enter your name here