ಪುತ್ತೂರು: ಮುಂಬಯಿಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲವು 2023, ನವೆಂಬರ್ ನಲ್ಲಿ ನಡೆಸಿದ ಪ್ರಾರಂಭಿಕ ಹಾಗೂ ಪ್ರವೇಶಿಕ ಪ್ರಥಮ ಪರೀಕ್ಷೆಯಲ್ಲಿ ಪುತ್ತೂರಿನ ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಸಂಸ್ಥೆಯು ಶೇ.ನೂರು ಫಲಿತಾಂಶ ಗಳಿಸಿಕೊಂಡಿದೆ.
ಪರೀಕ್ಷೆಗೆ ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಸಂಸ್ಥೆಯಿಂದ 29 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 22 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 7 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಈ ಎಲ್ಲಾ 29 ಮಂದಿ ವಿದ್ಯಾರ್ಥಿಗಳು ವಿಶ್ವಕಲಾ ನಿಕೇತನದ ಗುರುಗಳಾದ ವಿದುಷಿ ನಯನಾ ವಿ.ರೈ ಹಾಗೂ ವಿದುಷಿ ಸ್ವಸ್ತಿಕಾ ಆರ್.ಶೆಟ್ಟಿಯವರ ಶಿಷ್ಯಂದಿರಾಗಿದ್ದಾರೆ.