ಕಾವು ಸರಕಾರಿ ಶಾಲೆಯಲ್ಲಿ ಮೆಟ್ರಿಕ್ ಮೇಳ ಉದ್ಘಾಟನೆ

0

ಪುತ್ತೂರು: ಕಾವು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಸಂಘದ ವತಿಯಿಂದ ಮೆಟ್ರಿಕ್ ಮೇಳವನ್ನು ಫೆ.4ರಂದು ಆಯೋಜಿಸಲಾಯಿತು. ಶಾಲೆಯನ್ನು ದತ್ತು ಸ್ವೀಕರಿಸಿರುವ ಕಾವು ಹೇಮನಾಥ ಶೆಟ್ಟಿಯವರು ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಗಣಿತದ ಪರಿಕಲ್ಪನೆಗಳನ್ನು ಇತರ ವಿಷಯಗಳೊಂದಿಗೆ ಸೇರಿಸಿ ಪರಸ್ಪರ ಸಂಬಂಧ ಕಲ್ಪಿಸಿ ನಮ್ಮ ನಿತ್ಯ ಜೀವನದ ಭಾಗವನ್ನಾಗಿ ಮಾಡಿದಾಗ ಗಣಿತದ ಪರಿಲ್ಪನೆಗಳನ್ನು ಉತ್ಸಾಹ ಮತ್ತು ವಿನೋದಪೂರ್ವಕವಾಗಿ ಕಲಿಯಬಹುದು ಎಂದು ಮೆಟ್ರಿಕ್ ಮೇಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಎಸ್‌ಡಿಎಂಸಿ ನಾಮನಿರ್ದೇಶಿತ ಸದಸ್ಯರು, ಅರಿಯಡ್ಕ ಗ್ರಾಪಂ ಸದಸ್ಯರೂ ಆಗಿರುವ ದಿವ್ಯನಾಥ ಶೆಟ್ಟಿ ಕಾವು, ಗ್ರಾಪಂ ಸದಸ್ಯ ಅಬ್ದುಲ್ ರಹೀಮಾನ್, ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಪೂಜಾರಿ, ಉಪಾಧ್ಯಕ್ಷೆ ಗೀತಾ ಮಾಣಿಯಡ್ಕ ಹಾಗೂ ಎಸ್‌ಡಿಎಂಸಿಯ ಎಲ್ಲಾ ಸದಸ್ಯರು, ಪೋಷಕರು ಭಾಗವಹಿಸಿದ್ದರು. ಮೇಳದಲ್ಲಿ ವಿದ್ಯಾರ್ಥಿಗಳ ಸುಮಾರು 42 ಸ್ಟಾಲ್‌ಗಳನ್ನು ಚರುಮುರಿ, ಜ್ಯೂಸ್, ಎಳನೀರು ಶರಬತ್ತು, ಮಜ್ಜಿಗೆ, ಮನೆಯಲ್ಲಿ ತಯಾರಿಸಿದ ತಿಂಡಿಗಳು, ಪಾನಿಪುರಿ, ನಂದಿನಿ ಉತ್ಪನ್ನಗಳು, ಫ್ಯಾನ್ಸಿ ಐಟಂಗಳು, ಊರ ತರಕಾರಿ, ಕರಕುಶಲ ವಸ್ತುಗಳ ಭರ್ಜರಿ ಮಾರಾಟ ಮಾಡಿದರು. ಶಾಲಾ ಮುಖ್ಯಗುರು ಸವಿತಾ ಕುಮಾರಿ ಬಿ.ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಭಾಸ್ಕರ್ ಎನ್.ವಂದಿಸಿದರು. ಟಿಜಿಟಿ ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಪ್ರಮೀಳಾ, ಅನಿತಾ ಡಿ’ಸೋಜಾ, ವಸಂತಿ, ಮಲ್ಲಿಕಾ, ಶಮೀಮಾ, ಸಂತೋಷ್, ವನಿತಾ, ದೀಪಿಕಾ ಸಹಕರಿಸಿದ್ದರು.

LEAVE A REPLY

Please enter your comment!
Please enter your name here