ಪುತ್ತೂರು: ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2024 ದಲ್ಲಿ ಸಮಗ್ರ ಪ್ರಶಸ್ತಿಯನ್ನು ಪುತ್ತೂರು ವಲಯ 74 ಅಂಕ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಬನ್ನೂರು 70 ಅಂಕ ಪಡೆದು ದ್ವಿತೀಯ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಎರಡು ತಂಡಗಳು ರೋಲಿಂಗ್ ಟ್ರೋಪಿಯನ್ನು ಪಡೆದು ಕೊಂಡಿದೆ.
ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಸಹಕಾರದೊಂದಿಗೆ ಫೆ.11ರಂದು ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ನಡೆದ ಯುವ ಕ್ರೀಡಾ ಸಂಭ್ರಮದಲ್ಲಿ ಸಂಜೆಯ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಕಬಡ್ಡಿ ಪುರುಷರ ವಿಭಾಗದಲ್ಲಿ ಮುಂಡೂರು ವಲಯ (ಪ್ರ), ಈಶ್ಚರಮಂಗಲ ವಲಯ (ದ್ವಿ), 17ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ವಲಯ (ಪ್ರ), ಬನ್ನೂರು ವಲಯ (ದ್ವಿ),. ಹಗ್ಗಜಗ್ಗಾಟ ಮಹಿಳೆಯರ ವಿಭಾಗದಲ್ಲಿ ಪುತ್ತೂರು ವಲಯ (ಪ್ರ), ಬನ್ನೂರು ವಲಯ (ದ್ವಿ), ಪುರುಷರ ವಿಭಾಗದಲ್ಲೂರು ಪುತ್ತೂರು ವಲಯ (ಪ್ರ), ಬನ್ನೂರು ವಲಯ (ದ್ವಿ) ಸ್ಥಾನ ಪಡೆದಿದೆ. ವಾಲಿಬಾಲ್ ಪುರುಷರ ವಿಭಾಗದಲ್ಲಿ ಈಶ್ವರ ಮಂಗಲ ವಲಯ (ಪ್ರ),ಪುತ್ತೂರು ವಲಯ (ದ್ವಿ), ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ವಲಯ (ಪ್ರ),ಉಪ್ಪಿನಂಗಡಿ ವಲಯ( ದ್ವಿ) ಬಹುಮಾನ ಪಡೆದು ಕೊಂಡಿದೆ. ಅದರಂತೆ ವೈಯುಕ್ತಿ ಓಟ, ರಿಲೇಯಲ್ಲಿ ವೈಯುಕ್ತಿಕ ಬಹುಮಾನಗಳನ್ನು ವಿಜಯ ವೇದಿಕೆಯಲ್ಲಿ ಆಗಾಗ ನೀಡಲಾಗುತ್ತಿತ್ತು. ುದ್ಯಮಿ ಮಂಜುನಾಥ್ ಗೌಡ ಮತ್ತು ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಧಾಕೃಷ್ಣ ಗೌಡ ನಂದಿಲ ಮಾತನಾಡಿದರು.
ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಮಾಜಿ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಒಕ್ಕಲಿಗ ಸ್ವಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ, ಯುವ ಒಕ್ಜಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರ ಪುರುಷೋತ್ತಮ ಮುಂಗ್ಲಿಮನೆ, ಬನ್ನೂರು ವಲಯ ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ, ಬನ್ನೂರು ವಲಯದ ಸಂಘಟನಾ ಕಾರ್ಯದರ್ಶಿ ವಸಂತ ನೆಕ್ರಾಜೆ, ಮುಂಡೂರು ವಲಯದ ಅಧ್ಯಕ್ಷ ಚೆನ್ನಪ್ಪ ಗೌಡ, ಈಶ್ವರಮಂಗಲ ವಲಯ ಅಧ್ಯಕ್ಷ ಜಗನ್ನಾಥ ಪಟ್ಟೆ, ಉಪ್ಪಿನಂಗಡಿ ವಲಯ ಭರತ್, ತೀರ್ಪುಗಾರರಾದ ಗಂಗಾಧರ ಗೌಡ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಕ್ರೀಡಾ ಕಾರ್ಯದರ್ಶಿ ಪವನ್ ಗೌಡ ದೊಡ್ಡಮನೆ, ವಲಯ ಅಧ್ಯಕ್ಷ ಮೋಹನ್ ಕಬಕ, ವಲಯ ಕಾಯದರ್ಶಿ ಮನೋಜ್ ಗೌಡ ಜತ್ತಿಬೆಟ್ಟು, ವಲಯ ಉಸ್ತುವಾರಿ ಪೂವಪ್ಪ ದೇಂತಂಡ್ಕ, ವಲಯ ಕ್ರೀಡಾ ಕಾಯದರ್ಶಿ ಪ್ರಕಾಶ್ ಗೌಡ ಕೆಮ್ಮಾಯಿ, ಕೋಶಾಧಿಕಾರಿ ಶೇಖರ್ ಗೌಡ ಬನ್ನೂರು, ಗೌರವ ಸಲಹೆಗಾರ ವಿಶ್ವನಾಥ ಗೌಡ ಬನ್ನೂರು, ಪೂವಪ್ಪ ದೇಂತಡ್ಕ, ದಯಾನಂದ ಕೋಡಿಮರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸ್ವಾಗತಿಸಿ, ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ವಿಶ್ವನಾಥ್ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಸುಮಲತಾ, ಪ್ರತಿಭಾ, ನಮಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.