ವಿವೇಕಾನಂದ ಕನ್ನಡ ಶಾಲೆಯಲ್ಲಿ ರಥಸಪ್ತಮಿ ಕಾರ್ಯಕ್ರಮ

0

ಪ್ರತಿ ವರ್ಷ ಹೊಸತನವನ್ನು ಪಡೆಯುವ ಸೂರ್ಯನನ್ನು ನೋಡಿ ನಾವು ಬದುಕಲ್ಲಿ ಹೊಸತನವನ್ನು ಪಡೆಯಬೇಕು-ಅಶ್ವಿನಿ ಕೃಷ್ಣ ಮುಳಿಯ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ರಥಸಪ್ತಮಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ ಪ್ರತಿ ವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುವ ಸೂರ್ಯ ತನ್ನ ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಮೇಘಮಾಸ ,ಶುಕ್ಲ ಪಕ್ಷ ,ಸಪ್ತಮಿತಿಯಾದ ಇಂದು ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿ ಇದು ಸತ್ಯ. ಈತನ ಕಿರಣಗಳಲ್ಲಿ ವಿಟಮಿನ್ ” ಡಿ ” ಹೇರಳವಾಗಿದೆ ಹಾಗೂ ನಾವು ಆಹಾರ ,ರೋಗ ನಿವಾರಣೆ ,ಮಾನಸಿಕ, ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಸೂರ್ಯ ನಮಸ್ಕಾರ ಮಾಡುತ್ತೇವೆ ಎಂದರು.

 ಅಧ್ಯಕ್ಷ ರಮೇಶ್ಚಂದ್ರ ಕಾವು, ಪ್ರೌಢ ವಿಭಾಗದ ಮುಖ್ಯ ಗುರು ಆಶಾ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಗುರು ನಳಿನಿ ವಾಗ್ಲೆ, ಶಿಕ್ಷಕ – ಸಹ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮವು ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು. ಶಾಲಾ ಸಹ ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here