ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಉಪ್ಪಿನಂಗಡಿಯಲ್ಲಿ 108 ಸೂರ್ಯ ನಮಸ್ಕಾರ

0

ಆಲಂಕಾರು: ಸಂಸ್ಕಾರ, ಸಂಘಟನೆ, ಸೇವೆ ಶ್ರೀ ಪತಂಜಲಿಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಮಹಾ ನಗರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಗಾಣಿಗ ಸಮುದಾಯ ಭವನ, ಆಲಂಕಾರು ಶ್ರೀ ಭಾರತಿ ಶಾಖೆ, ಕೊಯಿಲ ಸದಾಶಿವ ಶಾಖೆ ವತಿಯಿಂದ ರಥ ಸಪ್ತಮಿ ಪ್ರಯುಕ್ತ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಆರ್ಚಕ ಶಂಕರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 4.40 ರಿಂದ ಯೋಗ ಬಂಧುಗಳಾದ ಚಂದ್ರಾವತಿ ರೈ, ಮಧು, ಚಂದ್ರಾವತಿ ಅವರಿಂದ ಭಜನೆ, ಸಂದೇಶ್ ಅವರಿಂದ ಅಮೃತವಚನ, ಕಾವ್ಯರವಿಯವರಿಂದ ಪಂಚಾಂಗ ಪಠಣ, ಮಾನಸಿಕ ಸಿದ್ಧತೆ ಹಾಗೂ ಉಸಿರಾಟದ ಕ್ರಿಯೆಯನ್ನು ಆಶಾ ಭಟ್, ಭುವನೇಶ್ವರಿ, ರಾಮಣ್ಣ, ಸ್ವಾತಿಕಾ ಉಪ್ಪಿನಂಗಡಿ ಬೌದ್ದಿಕ್ ನೇರವೇರಿಸಿದರು.


ಪ್ರಥಮ ಹಂತದಲ್ಲಿ 36 ಬಾರಿ ಸೂರ್ಯ ನಮಸ್ಕಾರವನ್ನು ಉಪ್ಪಿನಂಗಡಿ ಯೋಗಬಂಧುಗಳಾದ ಮೋಹನ, ರಾಜೇಶ್ ಶೆಟ್ಟಿ ಸಂಪ್ಯಾಡಿ, ಎರಡನೇ ಹಂತದ 36 ಸೂರ್ಯ ನಮಸ್ಕಾರವನ್ನು ಆಲಂಕಾರು ಶಾಖೆಯ ಸದಾಶಿವ ಶೆಟ್ಟಿ ಮಾರಂಗ, ನಾರಾಯಣ ನೆಕ್ಕರೆ, ಶರ್ಮಿಳಾ, ಮೂರನೇ ಹಂತದ 36 ಸೂರ್ಯ ನಮಸ್ಕಾರವನ್ನು ಉಪ್ಪಿನಂಗಡಿ ಪ್ರಜ್ಞಾ, ಕೃಷ್ಣರಾಜ, ದೀಪ್ತಿ ವಿವರಣೆ ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ನಡೆಸಿಕೊಟ್ಟರು. ಮಂತ್ರಪಠಣವನ್ನು ಆಶಾ, ಅಮೃತಾಸನವನ್ನು ಕೃಷ್ಣಪ್ಪ, ಅನ್ನಪೂರ್ಣೇಶ್ವರಿ ಮಂತ್ರವನ್ನು ಮೋಹಿನಿ ನಡೆಸಿಕೊಟ್ಟರು. ಏಕತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಗೋವಿಂದಪ್ರಸಾದ್ ಕಜೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕದ್ರಿನಗರ ಮಾರ್ಗದರ್ಶಕ ಆನಂದ ಕುಂಟಿನಿ, ತಾಲೂಕು ಸಹಶಿಕ್ಷಣ ಪ್ರಮುಖ ಪ್ರದೀಪ್ ಆಚಾರ್ಯ, ಶಿಕ್ಷಕರಾದ ಸಂತೋಷ್ ಕುಮಾರ್, ಯಶೋಧರ, ಯೋಗಬಂಧುಗಳಾದ ಮುರಳೀಕೃಷ್ಣ ಬಡಿಲ, ಪ್ರತಿಮಾ ರೈ ಸೇರಿದಂತೆ ಹಲವು ಮಂದಿ ಯೋಗಬಂಧುಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ, ಗಾಣಿಗ ಸಮುದಾಯ ಭವನ, ಆಲಂಕಾರು ಶ್ರೀ ಭಾರತಿ ಶಾಖೆ, ಕೊಯಿಲ ಸದಾಶಿವ ಶಾಖೆಯ ನೂರಕ್ಕಿಂತಲೂ ಅಧಿಕ ಮಂದಿ ಯೋಗ ಬಂಧುಗಳು ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here