ರೂ.34.52ಕೋಟಿ ವ್ಯವಹಾರ, ರೂ.11.24 ಲಕ್ಷ ಲಾಭ, ಶೇ.8 ಡಿವಿಡೆಂಡ್
ಪುತ್ತೂರು: ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.34,52,36,903.35 ವ್ಯವಹಾರ ನಡೆಸಿ ರೂ.11,24,686.02 ಲಾಭ ಗಳಿಸಿ, ಸದಸ್ಯರಿಗೆ ಶೇ.8 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಉಮೇಶ್ ಕೆ. ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.13ರಂದು ಸೈನಿಕ ಭವನದಲ್ಲಿ ನಡೆಯಿತು. ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷಾಂತ್ಯಕ್ಕೆ 1117 ಸದಸ್ಯರಿಂದ ರೂ.43,43,100 ಬಂಡವಾಳ, ರೂ.4,13,06,810 ಠೇವಣಿಗಳನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.3,61,77,858 ಸಾಲ ವಿತರಿಸಲಾಗಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಹೇಳಿದರು.
ಗೌರವಾರ್ಪಣೆ:
ವರದಿ ವರ್ಷ ಸಂಘದಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದ ಸದಸ್ಯರಾದ ಸತೀಶ್ ಪಿ.ಬಿ ., ವೆಂಕಟ್ರಮಣ ನಾಯಕ್, ರಂಜನ್, ವೈದ್ಯಕೀಯ ಪದವಿ ಪಡೆದ ಕ್ಷಾತ್ರೀಯ ಸಮಾಜದ ಡಾ.ಸಂಕೇತ್ ಬಿ., ಡಾ.ಚಿಂತನ್ ಎ.ಪಿ., ಡಾ.ಸಿಂಚನಾ, ಡಾ.ಸಂತೋಷ್ ಕೆಮ್ಮಿಂಜೆ, ಡಾ.ಲಿಖಿತಾ, ಕ್ಷಾತ್ರೀಯ ಸಮಾಜ ಸೇವಾ ಸಂಘದ ಆಧ್ಯಕ್ಷ ಸುರೇಶ್ ಕುಮಾರ್ ಪರಿವಾಗಿ ಅವರ ಪತ್ನಿ ವಾಣಿ ಸುರೇಶ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾ ಪರವಾಗಿ ಅವರ ಪತಿ ನವೀನ್, ಯುವ ವೃಂದದ ಅಧ್ಯಕ್ಷ ಅನೀಶ್, ಚಿನ್ನಾಭರಣ ಮೌಲ್ಯ ಮಾಪಕರಾದ ಜಗದೀಶ್ ಆಚಾರ್ಯ, ದಿನೇಶ್ ಆಚಾರ್ಯ, ಪಿಗ್ಮಿ ಸಂಗ್ರಾಹಕರಾದ ಅನಂತಕೃಷ್ಣ ರಾವ್ ಕೆ.ಎಸ್., ಗಗನ್ ಕುಮಾರ್, ಸೂರಜ್ನಂದಾರವರನ್ನು ಗೌರವಿಸಲಾಯಿತು.
ಅಗಲಿದ ದೇಶ ಕಾಯುವ ಭಾರತೀಯ ಯೋಧರಿಗೆ ಹಾಗೂ ಸಂಘದ ಮಾಜಿ ನಿರ್ದೇಶಕಿ ಚಂದ್ರಕಲಾ ಅವರಿಗೆ ಸಭೆಯ ಪ್ರಾರಂಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಶ್ಚರಿ ವರದಿ ಹಾಗೂ ಆಯವ್ಯಯ ಮಂಡಿಸಿದರು. ನಿರ್ದೇಶಕ ಜಿತೇಂದ್ರ ವಂದಿಸಿದರು. ಲೆಕ್ಕಿಗ ಜೀವನ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳಾದ ಶಿವಪ್ರಸಾದ್ ಸಹಕರಿಸಿದರು. ಆಶಿತಾ ಎನ್.,ಜ್ಞಾನೇಶ್ವರಿ ಪ್ರಾರ್ಥಿಸಿದರು.
ನಮ್ಮ ಸಹಕಾರಿ ಸಂಘ ಅತ್ಯಂತ ಚಿಕ್ಕದಾದರೂ ಬಲಿಷ್ಠ ವಾಗಿ, ಪ್ರಚಾರವಿಲ್ಲದೆ ಮುನ್ನಡೆಯುತ್ತಿದೆ. ಪ್ರತಿ ವರ್ಷ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಂಘದ ಶಾಖೆ ತೆರೆಯಲು ಎಲ್ಲರ ಸಹಕಾರ ಅಗತ್ಯ. ಲಾಭ ಬಯಸದೆ ಸಮಾಜಕ್ಕೆ ಅರ್ಪಣೆ ಮಾಡಲಾಗುತ್ತಿದೆ. ಪಾದರ್ಶಕವಾಗಿ ವ್ಯವಹಾರ ನಡೆಸುತ್ತದೆ. ಸದಸ್ಯರ ಸಹಕಾರದಿಂದ ಸಂಘವು ಬೆಳವಣಿಗೆಯಾಗಿ ಡಿವಿಡೆಂಡ್ ನೀಡುವಲ್ಲಿ ಸಹಕಾರಿಯಾಗಿದೆ.
– ಉಮೇಶ್ ಕೆ, ಅಧ್ಯಕ್ಷರು