ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಸ್ಥಾಪಕ ದಿನಾಚರಣೆಯನ್ನು ಪರ್ಲಡ್ಕ ಮಸೀದಿ ವಠಾರದಲ್ಲಿ ನಡೆಸಲಾಯಿತು. ಎಸ್‌ಕೆಎಸ್‌ಎಸ್‌ಎಫ್ ಪರ್ಲಡ್ಕ ಶಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪರ್ಲಡ್ಕ ಜಮಾಅತ್ ಉಪಾಧ್ಯಕ್ಷ, ಕೌನ್ಸಿಲರ್ ರಿಯಾಝ್ ಧ್ವಜಾರೋಹಣಗೈದರು. ಶಾಖಾಧ್ಯಕ್ಷ ತ್ವಾಹಾ ಪರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಸಂದೇಶ ಭಾಷಣ ಮಾಡಿದ ಸ್ಥಳೀಯ ಖತೀಬ್ ಅಬ್ದುಲ್ ರಶೀದ್ ರಹ್ಮಾನಿಯವರು ಎಸ್‌ಕೆಎಸ್‌ಎಸ್‌ಎಫ್ 1989ರಲ್ಲಿ ಅನಿವಾರ್ಯವಾಗಿ ಉದಯಗೊಂಡು ವಿದ್ಯಾರ್ಥಿಗಳಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಪ್ರಜ್ಞೆ ಮೂಡಿಸಿ ಇದೀಗ 35 ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಎಂದರು.
ಖಬರ್ ಝಿಯಾರತ್ ನಡೆಯಿತು. ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನಿಶ್ಮ, ಜೊತೆ ಕಾರ್ಯದರ್ಶಿ ಶಮೀರ್ ಸ್ಕೇಲ್, ಅಶ್ರಫ್ ಗೋಳಿಕಟ್ಟೆ, ಸದಸ್ಯರಾದ ಬಶೀರ್ ಅಕ್ಕರೆ, ಉಬೈದ್ ಗೋಳಿಕಟ್ಟೆ, ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯರಾದ ರಶೀದ್ ಹಾಜಿ ಪರ್ಲಡ್ಕ, ಯಂಗ್‌ಮೆನ್ಸ್ ಅಧ್ಯಕ್ಷ ಸಿನಾನ್ ಪರ್ಲಡ್ಕ, ಮುಸ್ತಫಾ ಫೈಝಿ ಮಲಪ್ಪುರಂ, ಶರೀಫ್ ಮೂಡೋಡಿ, ಮುಹಮ್ಮದ್ ಬೊಳ್ಳೂರು, ಹಿರಿಯರಾದ ಹುಸೈನಾರ್ ಹಾಜಿ, ಇಬ್ರಾಹಿಂ ಫ್ರೂಟ್, ಶಂಸುದ್ದೀನ್ ಹಾಜಿ ಉಪಸ್ಥಿತರಿದ್ದರು.