ಪುತ್ತೂರು: ಇಂಡಿಯಾಸ್ ಫಸ್ಟ್ ವನ್ ಸ್ಟಾಪ್ ಟೂಲ್ಸ್ ಸ್ಟೇಷನ್ ಎಂಬ ಕೀರ್ತಿ ಪಡೆದ ಟೋಟಲ್ ಟೂಲ್ಸ್ ಸ್ಟೇಷನ್ನ ಫ್ರಾಂಚೈಸಿ ಪ್ರಸ್ತುತಿ ವೆಂಚರ್ಸ್ ಫೆ.19ರಂದು ಪರ್ಲಡ್ಕ ಬೈಪಾಸ್ ಜಂಕ್ಷನ್ ಬಳಿ ಶುಭಾರಂಭಗೊಂಡಿತು.
ಮಾಲಕ ಪ್ರವೀಣ್ ಮರಕ್ಕೂರುರವರ ತಂದೆ ಈಶ್ವರ ಭಟ್ ಮರಕ್ಕೂರುರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆರ್ಗ್ಯಾನಿಕೆಮ್ ರಸಗೊಬ್ಬರ ಸಂಸ್ಥೆಯ ಪಾಲುದಾರೆ ಶ್ರೀಮತಿ ಪ್ರಸನ್ನರವರು ಮಾತನಾಡಿ ಟೋಟಲ್ ಟೂಲ್ಸ್ ಸ್ಟೇಷನ್ ಫ್ರಾಂಚೈಸಿಯು ಮಲ್ಟಿ ಟೂಲ್ನ ಹಬ್ ಆಗಿದೆ. ಕರ್ನಾಟಕದಲ್ಲಿ 3ನೇ ಶಾಖೆ ಪುತ್ತೂರಿನಲ್ಲಿ ಶುಭಾರಂಭಗೊಂಡಿದೆ. ಒಂದೇ ಹಬ್ನಲ್ಲಿ ವಿವಿಧ ಬಗೆಯ ಟೂಲ್ಗಳು ಸಿಗುತ್ತದೆ. ವಾಹನ, ಕನ್ಸ್ಟ್ರಕ್ಷನ್ ಹಾಗೂ ಇತರ ಕ್ಷೇತ್ರಕ್ಕೆ ಸಂಬಂಧಿಸಿದ ಮಲ್ಟಿ ಯುಟಿಲಿಟಿ ಟೂಲ್ಗಳು ಇಲ್ಲಿ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ತುಂತುರು ಕಂಪೆನಿಯ ನಿರ್ದೇಶಕ ರವಿರಾಜ್ ಮಾತನಾಡಿ ಟೋಟಲ್ ಎಂಬುದು ಮಲ್ಟಿ ಬ್ರಾಂಡ್ ಕಂಪೆನಿಯಾಗಿದೆ. ಒಂದೇ ಬ್ರಾಂಡ್ನಲ್ಲಿ 2000ಕ್ಕಿಂತ ಹೆಚ್ಚಿನ ಪ್ರೊಡಕ್ಟ್ನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ 3ನೇ ಔಟ್ಲೆಟ್ ಪುತ್ತೂರಿನಲ್ಲಿ ಇದೀಗ ಶುಭಾರಂಭಗೊಂಡಿದೆ. ಇದೇ ಔಟ್ಲೆಟ್ನಲ್ಲಿ ಸೇಲ್ಸ್ ಮತ್ತು ಸರ್ವಿಸ್ ಕೂಡ ಲಭ್ಯವಿದೆ. ಗ್ರಾಹಕರು ಫ್ರಾಂಚೈಸಿಗೆ ಬಂದು ಮಾಹಿತಿ ಪಡೆದುಕೊಳ್ಳಿ ಎಂದರು.
ಟೋಟಲ್ ಟೂಲ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಗಫೂರ್, ಚೀಫ್ ಮಾರ್ಕೆಟಿಂಗ್ ಆಫೀಸರ್ ಅಲವಿ, ತುಂತುರು ಕಂಪೆನಿ ನಿರ್ದೇಶಕ ನಿತಿನ್, ಕಾಮೆಟ್ಟು ಸುಬ್ರಾಯ ಭಟ್, ಕುಮಾರಿ, ಡಿಬಿಸಿ ನಾಲೆಡ್ಜ್ ಹಬ್ ಮಾಲಕ ದಿನೇಶ್ ವಿ. ಭಟ್, ಕಟ್ಟದ ಮಾಲಕ ವಿಜಯ ಸೋಲಾರ್ನ ಗಿರೀಶ್ ಕಂದೇಲು ಉಪಸ್ಥಿತರಿದ್ದರು. ತುಂತುರು ಕಂಪೆನಿ ನಿರ್ದೇಶಕ ಗೌರಿಶಂಕರ್ ವಂದಿಸಿದರು.
ಟೋಟಲ್ ಕಂಪೆನಿಯ ಮಲ್ಟಿ ಮೆಷಿನ್, ಟೂಲ್ಗಳು ಒಂದೇ ಸೂರಿನಡಿ ಲಭ್ಯ
ಪ್ರಸ್ತುತಿ ವೆಂಚರ್ಸ್ ಮಾಲಕ ಪ್ರವೀಣ್ ಮರಕ್ಕೂರು ಸ್ವಾಗತಿಸಿ ಮಾತನಾಡಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಟೋಟಲ್ ಕಂಪೆನಿಯವರ ಪ್ರಾಂಚೈಸಿ ಆರಂಭಗೊಂಡಿದೆ. ಗಾರ್ಡನ್ ಟೂಲ್ಸ್, ಪವರ್ ಟೂಲ್ಸ್, ಹ್ಯಾಂಡ್ ಟೂಲ್ಸ್, ಅಗ್ರಿ ಯುಟಿಲಿಟಿ ಮೆಷಿನರಿ, ಬೆಂಚ್ ಟೂಲ್ಸ್, ಸೇಫ್ಟಿ ಪ್ರೊಡಕ್ಟ್, ವೆಲ್ಡಿಂಗ್ ಮೆಷಿನ್ ಮೊದಲಾದ ಪ್ರೊಡಕ್ಟ್ನ್ನು ನಾವು ಕೊಡುತ್ತಿದ್ದೇವೆ. ಪುತ್ತೂರಿನಲ್ಲಿ ಕೃಷಿ, ಕೈಗಾರಿಕೆ, ಕಟ್ಟಡ ನಿರ್ಮಾಣ, ವಾಹನ ರಿಪೇರಿ, ಮರ ಮುಟ್ಟು ತಯಾರಿಕೆ ಬೇಕಾಗುವಂತಹ ಎಲ್ಲ ಉಪಕರಣಳು, ಕಟ್ಟಿಂಗ್ ಮಷೀನ್, ಬ್ರೇಕರ್ಸ್, ಪೊಲೀಶಿಂಗ್, ವಾಕ್ಯುಮ್ ಕ್ಲೀನರ್ಸ್, ಪವರ್ ವಾಷಿಂಗ್ ಮುಂತಾದವುಗಳು ಒಂದೇ ಸೂರಿನಡಿ ಸಿಗುವ ಹಾಗೆ ಮಾಡಲಾಗಿದೆ. ಎಲ್ಲರೂ ಸಹಕಾರ ನೀಡಿ ಎಂದರು.