ಫೆ.22: ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ

0

ಪುತ್ತೂರು: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಪುತ್ತೂರು ತಾಲೂಕು ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು, ಪಶು ಚಿಕಿತ್ಸಾ ಕೇಂದ್ರ ಕೋಡಿಂಬಾಡಿ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ಫೆ.22ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 10 ಗಂಟೆಗೆ ಕೋಡಿಂಬಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ. 10.30ರಿಂದ 11ರವರೆಗೆ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಅಂಗನವಾಡಿ ಕೇಂದ್ರದ ಬಳಿ, 11.45ರಿಂದ 12.15ರವರೆಗೆ ಕೋಡಿಂಬಾಡಿ ಗ್ರಾಮದ ಪಣಿತೋಟ ಈಶ್ವರ ಗೌಡ ಇವರ ಮನೆ ಬಳಿ, 12.30 ರಿಂದ 1 ಗಂಟೆವರೆಗೆ ಕೋಡಿಂಬಾಡಿ ಗ್ರಾಮದ ಪಶು ಚಿಕಿತ್ಸಾ ಕೇಂದ್ರದ ಬಳಿ, 10.30ರಿಂದ 11ರವರೆಗೆ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಲಕ್ಷ್ಮೀಶ ಇವರ ಅಂಗಡಿಯ ಹಾಲಿನ ಸೊಸೈಟಿ ಬಳಿ, 11.45ರಿಂದ 12.15ರವರೆಗೆ ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಬಳಿ, 12.30ರಿಂದ 1ಗಂಟೆಯವರೆಗೆ ಬೆಳ್ಳಿಪ್ಪಾಡಿ ಗ್ರಾಮದ ಕೋಡಿ ಶೀನಪ್ಪ ಪೂಜಾರಿ ಇವರ ಅಂಗಡಿಯ ಬಳಿ ನಡೆಯಲಿದೆ ಎಂದು‌ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here