ಉಪ್ಪಿನಂಗಡಿ: ದತ್ತಿ ನಿಧಿ ಉಪನ್ಯಾಸ, ಪದಗ್ರಹಣ ಸಮಾರಂಭ

0

ಉಪ್ಪಿನಂಗಡಿ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಉಪ್ಪಿನಂಗಡಿ ಹೋಬಳಿ ಘಟಕದ ಪದಗ್ರಹಣ ಸಮಾರಂಭ ಹಾಗೂ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವು ಉಪ್ಪಿನಂಗಡಿಯ ಪಂಜಳದ ಮಣಿಮಂಟಪದಲ್ಲಿ ಆದಿತ್ಯವಾರ ನಡೆಯಿತು.


ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್‌ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ವಾಂಸ ಮುಂಬಾಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರೂ ಆಗಿರುವ ತಾಳ್ತಜೆ ವಸಂತ ಕುಮಾರ ರವರು, ಕನ್ನಡ ಸಾಹಿತ್ಯದೊಳಗಿನ ರಸಾಮೃತವನ್ನು ಸವಿಯುವ ಅವಕಾಶ ಹೆಚ್ಚು ಹೆಚ್ಚು ಲಭಿಸುವಂತಾಗಲಿ ಎಂದರು.


ಮಹಾಭಾರತ ಅನುಸಂಧಾನ ಎಂಬ ವಿಚಾರದಲ್ಲಿ ದತ್ತಿ ನಿಧಿ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರು, ಅಂತರಂಗದ ಲೋಕ ಹೇಗೆ ಇದೆಯೋ ಹಾಗೆ ನೋಡುವ ಎದೆಗಾರಿಕೆ ಇರಬೇಕಾಗಿದೆ ಎಂದರು.


ಕೃತಿ ಪರಿಚಯವನ್ನು ಮಾಡಿದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ದ.ಕ ಜಿಲ್ಲೆಯ ಮೂರನೇ ಸಾಹಿತಿಯಾಗಿರುವ ಲಕ್ಷ್ಮೀಶ ತೋಳ್ಪಾಡಿ ಯವರ ಮಹಾಭಾರತ ಅನುಸಂಧಾನ ಕೃತಿಯಲ್ಲಿ ನಾಶದ ನಡುವೆಯೂ ಒಂದು ಚಿಗುರು ಎದ್ದೇಳುವುದನ್ನು ಕಾಣಬಹುದಾಗಿದೆ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಉಪ್ಪಿನಂಗಡಿ ಹೋಬಳಿ ಅಧ್ಯಕ್ಷರಾದ ಕರುಣಾಕರ ಸುವರ್ಣ, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಬಿ. ಐತ್ತಪ್ಪ ನಾಯ್ಕ ಉಪಸ್ಥಿತರಿದ್ದರು.


ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾಗಿ ಕರುಣಾಕಾರ ಸುವರ್ಣ, ಗೌರವ ಕಾರ್ಯದರ್ಶಿಯಾಗಿ ಯು.ಎಲ್. ಉದಯ ಕುಮಾರ್, ಗೌರವ ಕೋಶಾಧ್ಯಕ್ಷರಾಗಿ ಡಾ. ಗೋವಿಂದಪ್ರಸಾದ್ ಕಜೆ, ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್, ಸದಸ್ಯರಾದ ಶಾಂತಾ ಕುಂಟಿನಿ, ವಿಮಲಾ ತೇಜಾಕ್ಷಿ, ಸುಂದರಿ, ಅಬ್ದುಲ್ ರಹಿಮಾನ್ ಯೂನಿಕ್, ವೀಣಾ ಪ್ರಸಾದ್ ಪದ ಸ್ವೀಕರಿಸಿದರು.


ಕಾರ್ಯಕ್ರಮದಲ್ಲಿ ಮಣಿಲ ವಿಠಲ ಶಾಸ್ತ್ರಿ, ಡಾ. ಎ.ಪಿ. ಭಟ್, ಕಡೆಮಜಲು ಸುಭಾಶ್ ರೈ, ಪ್ರೀತಿ ಎಸ್. ರೈ, ಕೈಲಾರ್ ರಾಜಗೋಪಾಲ ಭಟ್, ರಾಮಚಂದ್ರ ಮಣಿಯಾಣಿ, ವಂದನಾ ಶರತ್ , ಜಯಾನಂದ ಪೆರಾಜೆ, ರವೀಂದ್ರ ದರ್ಬೆ, ಮಹಾಲಿಂಗೇಶ್ವರ ಭಟ್, ದುರ್ಗಾಮಣಿ, ರಮೇಶ್ ಕಜೆ , ಸುಲೇಖಾ ವರದರಾಜ್, ಸುಬ್ಬಪ್ಪ ಕೈಕಂಬ, ಸುಧಾಕರ ಶೆಟ್ಟಿ, ಆದೇಶ್ ಶೆಟ್ಟಿ, ಕುಸುಮಾ ಕೆ., ಶಶಿಕಲಾ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಶಶಿಧರ್ ಶೆಟ್ಟಿ, ಗೀತಾ ಲಕ್ಷ್ಮಿ ತಾಳ್ತಜೆ, ವೀಣಾಪ್ರಸಾದ್ ಕಜೆ, ಬಾಲಕೃಷ್ಣ ಭಟ್, ಸುಧಾಪೂರ್ಣ, ಉದಯ ಕುಮಾರ್ ತೆಕ್ಕುಂಜೆ, ಅತುಲ್ ಕಶ್ಯಪ್, ಅಕ್ಷರ ಕಶ್ಯಪ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here