ಕಡಬ: ಕುಡಿತದ ಚಟ, ಪ್ರಯಾಣಿಸುತ್ತಿದ್ದ ಬಸ್ಸಿನ ಸೀಟಿನಡಿಯಲ್ಲಿ ಮಲಗಿದ ಗ್ರಾಮಕರಣಿಕ!

0

ಕಡಬ: ಕುಡಿತದ ಚಟಕ್ಕಾಗಿ ಹಲವು ಬಾರಿ ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ಗೋಳಿತೊಟ್ಟು ಗ್ರಾಮದ ವಿ.ಎ ಫೆ.20ರಂದು ಮತ್ತೆ ಕುಡಿದು ಅವಾಂತರ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ. ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ. ಇದು ಹವ್ಯಾಸವನ್ನು ಚಟವಾಗಿಸುತ್ತದೆ. ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡೆಸಿಕೊಳ್ಳುತ್ತಾನೆ. ತನ್ನ ಬದುಕಿನ ಮೌಲ್ಯಗಳಿಗೂ ಎರವಾಗುತ್ತಾನೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ.

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿ ಎ ಕುಡಿದ ಅಮಲಿನಲ್ಲಿ ಬಸ್ ನಲ್ಲಿ ಬಿದ್ದುಕೊಂಡಿದ್ದಾನೆ. ಇದೆಲ್ಲಾ ನಡೆದದ್ದು, ಸುಬ್ರಹ್ಮಣ್ಯ- ಕಡಬ ಬಸ್ ನಲ್ಲಿ. ಗೋಳಿತೊಟ್ಟು ಗ್ರಾಮದ ವಿ.ಎ ನಾಗಸುಂದರ ಕುಡಿದು ಬಸ್ ಸೀಟ್ ಅಡಿಯಲ್ಲಿ ಮಲಗಿ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದ್ದಾನೆ. ಹೀಗಾಗಿ ಬಸ್ ಚಾಲಕ ನೇರವಾಗಿ ಬಸ್ಸನ್ನು ಕಡಬ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಸ್ಟೇಷನ್ ನಲ್ಲಿ ಪೊಲೀಸರ ಸಹಾಯದಿಂದ ವಿ.ಎ ಯನ್ನು ಇಳಿಸಿ ಬಸ್ ಮುಂದೆ ಹೋಗಿದೆ. ಬಳಿಕ ಹಲವರು ಸೇರಿ ವಿ.ಎ ಸಾಹೇಬರನ್ನು ಆತನ ನಿವಾಸದ ಹೊರಗೆ ಮಲಗಿಸಿ ಬಂದಿದ್ದಾರೆ. ವಿ.ಎ ನಾಗಸುಂದರ ಈ ಹಿಂದೆಯೂ ಹಲವಾರು ಬಾರಿ ಕುಡಿದು ರಸ್ತೆಯಲ್ಲಿ ಬಿದ್ದು ಇದೇ ರೀತಿ ವರ್ತಿಸಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗಿದ್ದ. ಆದರೆ ಇತ್ತೀಚೆಗೆ ಇದು ಈತನ ನಿತ್ಯ ಕಾಯಕ ಎಂಬಂತಾಗಿದ್ದು ಈತನ ಈ ಚಟದಿಂದ ಹಲವು ದಾಖಲೆ ಪತ್ರ ಕಳೆದು ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಚಾರ‌ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here