ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಟೆಕ್ಸ್ಟೈಲ್ಸ್ ಸೆಂಟರ್ ಮಾಲಕ, ಹಿರಿಯ ಉದ್ಯಮಿ ಯಹ್ಯಾಹಾಜಿ (೮೦ ವರ್ಷ)ರವರು ಅಸೌಖ್ಯದಿಂದ ಫೆ. ೨೩ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಯಾಹ್ಯಾ ಹಾಜಿಯವರು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ, ಕ್ರೆಸೆಂಟ್ ಯೆಂಗ್ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೂಲತ ಚಿಕ್ಕ ಪುತ್ತೂರು ನಿವಾಸಿಯಾಗಿದ್ದ ಇವರು ಪ್ರಸ್ತುತ ಕೂರ್ನಡ್ಕ ಕಾವೇರಿ ಕಟ್ಟೆ ಯಲ್ಲಿ ವಾಸ್ತವ್ಯವಿದ್ದರು. ಪುತ್ತೂರಿನ ಹೆಸರಾಂತ ಜವಳಿ ವ್ಯಾಪಾರಿಯಾಗಿದ್ದ ದಿವಂಗತ ಕಂಬಳಬೆಟ್ಟು ಮುಹಮ್ಮದ್ ಮುಸ್ಲಿಯಾರ್ ರವರ ಪುತ್ರರಾಗಿರುವ ಮೃತರು ಪತ್ನಿ ಹಾಗೂ ಪುತ್ರ ಶಮೀರ್, ಸಹೋದರರಾದ ಉದ್ಯಮಿಗಳಾದ ತ್ವಯ್ಯಿಬ್ ಹಾಜಿ ಪಡೀಲ್ , ಅಬ್ದುಲ್ ರಝಾಕ್ ಹಾಜಿ (ಮೋನುಚ್ಚ), ಸಿರಾಜ್ ಹಾಜಿ, ಮತ್ತು ವಹೀದ್ರವರನ್ನು ಅಗಲಿದ್ದಾರೆ.