ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಶ್ರೀ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ಇದರ ವಾರ್ಷಿಕ ಜಾತ್ರೋತ್ಸವ ಫೆ.25ರಿಂದ 29ವರೆಗೆ
ಮೂಡಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಅಂಗವಾಗಿ ಫೆ.26 ರಂದು ಬೆಳಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ ನಾಗದೇವರ ಸಾನಿಧ್ಯದಲ್ಲಿ ಶುದ್ದಿಹೋಮ, ಕಲಶಾಭಿಷೇಕ, ಆಶ್ಲೇಷ ಬಲಿ ಮತ್ತು ಧೂಮವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ದಿ ನವಕ ಪ್ರಧಾನ ಸೇವೆ,11.20ಕ್ಕೆ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ,ಮಾತೆ ದೇಯಿ ಬೈದ್ಯೆತಿ ದೈವಸ್ಥಾನದಲ್ಲಿ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ವೈ ಸುವರ್ಣ, ಮಂಗಳೂರು ಅನುವಂಶಿಕ ಆಡಳಿತ ಮೂಕ್ತೇಸರ ಶ್ರೀಧರ ಪೂಜಾರಿ ಗೆಜ್ಜೆಗಿರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಸಂಜೀವ ಪೂಜಾರಿ ಬಿರ್ವ, ಹಿರಿಯರಾದ ಲೀಲಾವತಿ ಗೆಜ್ಜೆಗಿರಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪುತ್ತೂರು ಶೇಖರ ಬಂಗೇರ ಬೆಳ್ತಂಗಡಿ,ನಾರಾಯಣ ಪೂಜಾರಿ ಮಚ್ಚಿನ, ಜಯರಾ ಬಂಗೇರ ಬೆಳ್ತಂಗಡಿ ವಸಂತ ಅಮಿನ್ ನುಳಿಯಾಲು, ಜಯಾನಂದ ಎಂ ಮಂಗಳೂರು, ಬಾಸ್ಕರ್ ಅಮೀನ್ ಮಂಗಳೂರು, ಕುಲೂರು ಯುವವಾಣಿ ಘಟಕ ಅಧ್ಯಕ್ಷೆ ಇಂದಿರಾ ಸುರೇಶ್ ರವೀಂದ್ರ ಪೂಜಾರಿ ಗೆಜ್ಜೆಗಿರಿ, ಮಹಾಬಲ ಪೂಜಾರಿ ಗೆಜ್ಜೆಗಿರಿ, ಜಯರಾಮ ಪೂಜಾರಿ ಕೆಲಂದೂರು ಗೆಜ್ಜೆಗಿರಿ ಮ್ಯಾನೇಜರ್ ದೀಪಕ್ ಮತ್ತಿತರು ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ರಮ
10.30 ರಿಂದ ಮಹಾಲಕ್ಷ್ಮಿ ಭಜನಾ ಮಂಡಳಿ ಸುಳ್ಯಪದವು ಇದರ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.