ಎಸ್‌ಡಿಪಿ ಕಲೋಪಾಸನಾ ಸಾಂಸ್ಕೃತಿಕ ಸಂಭ್ರಮಕ್ಕೆ ತೆರೆ – ಹನುಮಗಿರಿ ಮೇಳದವರಿಂದ `ಇಂದ್ರಪ್ರಸ್ಥ’ ಯಕ್ಷಗಾನ

0

ಪುತ್ತೂರು: ಪುತ್ತೂರು: ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆವಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಿದ 20ನೇ ವರ್ಷದ ಎಸ್‌ಡಿಪಿ ಕಲೋಪಾಸನಾ -2024 ಸಾಂಸ್ಕೃತಿಕ ಕಲಾ ಸಂಭ್ರಮವು ಫೆ.26ರಂದು ಹನುಮಗಿರಿ ಮೇಳದವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನದ ಮೂಲಕ ತೆರೆ ಕಂಡಿದೆ.

ಕೊನೆಯ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಆರ್.ಎಸ್‌ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಕೇವಲ ಪ್ರದರ್ಶನಕ್ಕಾಗಿ ಕಲೆ ಇರುವುದಲ್ಲ. ಅದರ ಉಪಾಸನೆಯಾಗಬೇಕು. ಕಲೆಯ ಉಪಾಸನೆಯ ಕೆಲಸವನ್ನು ಹಲವು ವರ್ಷಗಳಿಂದ ಎಸ್‌ಡಿಪಿ ಸಂಸ್ಥೆಯ ಡಾ.ಹರಿಕೃಷ್ಣ ಪಾಣಾಜೆ ಕುಟುಂಬಸ್ಥರು ಕಲೋಪಾಸನಾ' ಕಾರ್ಯಕ್ರಮದ ಮೂಲಕ ನಡೆಸುತ್ತಿದ್ದಾರೆ. ಕಲೆಯ ಬಗೆಗಿನ ಹೊಸ ದೃಷ್ಠಿ ಜೀವನ ಮೌಲ್ಯಗಳನ್ನು ಮತ್ತೆ ನೆನಪಿಸಿಲು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಕ್ರಮ ನೀಡುವ ಮಾನಸಿಕತೆಯುಲ್ಲ ಎಸ್‌ಡಿಪಿ ಸಂಸ್ಥೆಯ ಮೂಲಕ ಇನ್ನಷ್ಟು ಸಮಾಜ ಮುಖಿ ಕೆಲಸ ನಡೆಯಲಿ ಎಂದರು. ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖ, ಸುಜಾತ, ಡಾ.ಮೇಘನಾ ಪಾಣಾಜೆ, ಡಾ.ಕೇದಾರಕೃಷ್ಣ ಪಾಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹನುಮಗಿರಿ ಮೇಳದವರಿಂದಇಂದ್ರಪ್ರಸ್ಥ’ ಯಕ್ಷಗಾನ ಪ್ರದರ್ಶನದ ಮೂಲಕ 20ನೇ ವರ್ಷದ ಕಲೋಪಾಸನಾ ಸಾಂಸ್ಕೃತಿಕ ಸಂಭ್ರಮವು ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here