‘ಡಿ’ಗ್ರೂಪ್ ವಿಟ್ಲ ಇದರ ವಾರ್ಷಿಕ ಮಹಾಸಭೆ

0

ವಿಟ್ಲ: ‘ಡಿ’ ಗ್ರೂಪ್ ವಿಟ್ಲ ಇದರ ವಾರ್ಷಿಕ ಮಹಾಸಭೆಯು ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ಸಂಘಟನೆಯ ಕಚೇರಿಯಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿರವರು ಸಂಘಟನೆಯು ನಡೆದು ಬಂದ ಹಾದಿ, ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ನಿಷ್ಕ್ರಿಯ ಸದಸ್ಯರನ್ನು ಕೈ ಬಿಟ್ಟು ಹಕೀಂ ಬಿಗ್‌ಬೇಕ್, ರಫೀಕ್ ಇಂಜಿನಿಯರ್, ಸಫ್ವಾನ್ ಎಲ್‌ಐಸಿ ಹಾಗೂ ಇಸ್ಮಾಯಿಲ್ ಸೂಪರ್ ರವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.

2024-25 ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಿ.ಎಚ್.ರಿಯಾಝ್, ಗೌರವಾಧ್ಯಕ್ಷರಾಗಿ ಅಝೀಝ್ ಸನ, ಉಪಾಧ್ಯಕ್ಷರಾಗಿ ಶೀತಲ್ ಇಕ್ಬಾಲ್, ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು, ಜತೆ ಕಾರ್ಯದರ್ಶಿಯಾಗಿ ವಿ.ಕೆ.ಎಂ.ಹಂಝ, ಕೋಶಾಧಿಕಾರಿಯಾಗಿ ಬಶೀರ್ ಬೊಬ್ಬೆಕೇರಿ, ಮಾದ್ಯಮ ಪ್ರತಿನಿಧಿಗಳಾಗಿ ಅಬೂಬಕರ್ ಅನಿಲಕಟ್ಟೆ ಮತ್ತು ಮಹಮ್ಮದ್ ಅಲಿ ವಿಟ್ಲ, ಗೌರವ ಸಲಹೆಗಾರರಾಗಿ ಝುಬೈರ್ ಮಾಸ್ಟರ್, ಖಲಂದರ್ ಪರ್ತಿಪ್ಪಾಡಿ, ಇಸಾಕ್ ವಿಟ್ಲ, ಸಮದ್ ಮೇಗಿನಪೇಟೆ, ಆ್ಯಂಬುಲೆನ್ಸ್ ನಿರ್ವಹಣೆಗಾರರಾಗಿ ಹಂಝ ವಿಟ್ಲ, ತೌಸೀಫ್ ವಿಟ್ಲ, ಉಬೈದ್ ವಿಟ್ಲ, ರಫೀಕ್ ಪೊನ್ನೋಟು, ಸೌದಿ ಅರೇಬಿಯಾ ವಕ್ತಾರರಾಗಿ ಫಾರಿಸ್ ಮತ್ತು ಮನ್ಸೂರ್ ಮಂಗಿಲಪದವು, ದುಬೈ ವಕ್ತಾರರಾಗಿ ರಾಝಿಕ್ ಡಿ ಇವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here