ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಉಪ್ಪಿನಂಗಡಿ ಜೇಸಿಐ, ರೋಟರಿ ಕ್ಲಬ್ ಉಪ್ಪಿನಂಗಡಿ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಉಪ್ಪಿನಂಗಡಿ ಹಾಗೂ ಗೆಳೆಯರು- 94 ಉಪ್ಪಿನಂಗಡಿ ಮತ್ತು ಮಯೂರ ಮಿತ್ರವೃಂದ ಪುಳಿತ್ತಡಿ ಇವರ ಜಂಟಿ ಆಶ್ರಯದಲ್ಲಿ ಉಪ್ಪಿನಂಗಡಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಬ್ಯಾಂಕ್ ಆಫ್ ಬರೋಡಾದ ಉಪ್ಪಿನಂಗಡಿ ಶಾಖೆಯ ವ್ಯವಸ್ಥಾಪಕ ವಿಶುತ್ ಕುಮಾರ್ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಕೃಷ್ಣಾನಂದ ಕೆ., ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್ನ ಸಮುದಾಯ ದಂತ ಚಿಕಿತ್ಸಾ ವಿಭಾಗದ ವೈದ್ಯ ಡಾ. ಅವಿನಾಶ್ ಬಿ.ಆರ್., ಜೇಸಿಐ ವಲಯ 15ರ ಉಪಾಧ್ಯಕ್ಷ ಶಂಕರ್ ರಾವ್, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಗೆಳೆಯರು -94 ಅಧ್ಯಕ್ಷ ಗುಣಕರ ಅಗ್ನಾಡಿ, ಮಯೂರ ಮಿತ್ರವೃಂದದ ಅಧ್ಯಕ್ಷ ಹರೀಶ್ ಕೊಡಂಗೆ, ಜೇಸಿಐ ವಲಯ 15ರ ವಲಯಾಧಿಕಾರಿ ದಯಾಕರ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಯತೀಶ್ ಶೆಟ್ಟಿ, ಡಾ. ಗೋವಿಂದ ಪ್ರಸಾದ ಕಜೆ, ಅಬ್ದುರ್ರಹ್ಮಾನ್ ಯುನಿಕ್, ಧರ್ನಪ್ಪ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ನ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪಿನಂಗಡಿ ವಲಯ, ನವೋದಯ ಸ್ವಸಹಾಯ ಗುಂಪುಗಳು ಉಪ್ಪಿನಂಗಡಿ ವಲಯ ಇವುಗಳ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ 92 ಮಂದಿ ಪ್ರಯೋಜನ ಪಡೆದುಕೊಂಡರು.
ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿದರು. ಜೇಸೀಯ ಉಪ್ಪಿನಂಗಡಿ ಅಧ್ಯಕ್ಷೆ ಲವೀನಾ ಪಿಂಟೋ ವಂದಿಸಿದರು. ಮೋಹನ್ಚಂದ್ರ ಎನ್.ಪಿ. ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ. ಕುಲಾಲ್, ಆನಂದ ರಾಮಕುಂಜ ಸಹಕರಿಸಿದರು.