ಪಡುಮಲೆ ಪ್ರತಿಷ್ಠಾ ವರ್ಧಂತಿ ಉತ್ಸವ- ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

0

ಬಡಗನ್ನೂರುಃ : ಪಡುವನ್ನೂರು ಗ್ರಾಮದ ಬದಿನಾರು  ಶ್ರೀ ಪೂಮಾಣಿ-ಕಿನ್ನಿಮಾಣಿ,  ಹಾಗೂ ರಾಜನ್  ದೈವಗಳ  ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಅಂಗವಾಗಿ ಕ್ಷೇತ್ರದಲ್ಲಿ ಫೆ. 26 ರಂದು  ಬೆಳಗ್ಗೆ ಗಣಪತಿ ಹೋಮ, ದೈವಗಳಿಗೆ ನವಕಾಭಿಷೇಕ, ದೈವಗಳಿಗೆ ತಂಬಿಲ ಸೇವೆ ನಡೆಯಿತು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಕ್ಷೇತ್ರಕ್ಕೆ ಭೇಟಿ;-
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿಯ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು.ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ  ಸದಸ್ಯ ರವಿರಾಜ ರೈ ಸಜಂಕಾಡಿ  ಕ್ಷೇತ್ರದ ಐತಿಹಾಸಿಕ ಹಿನ್ನಲೆ  ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ  ವ್ಯವಸ್ಥಾಪನಾ ಸಮಿತಿಯ ವತಿಯಿಂದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳರನ್ನು  ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು.

ಮನವಿ
ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳ ದೈವಸ್ಥಾನವು  ಧಾರ್ಮಿಕ ಮುಜರಾಯಿ ದತ್ತಿ ಇಲಾಖೆಗೆ ಸೇರಿದ್ದು  ಕ್ಷೇತ್ರದಲ್ಲಿ  ಅಗತ್ಯವಾಗಿ ನಿರ್ಮಾಣ ಗೊಳ್ಳಬೇಕಾದ  ಧ್ವಜಸ್ಥಂಭ, ದೈವಗಳ ಬಂಡಿ ಮತ್ತು ಬಂಡಿ ಕೊಟ್ಯ  ಹಾಗೂ ಪಾಕಶಾಲಾ ಕಟ್ಟಡ ನಿರ್ಮಾಣಕ್ಕೆ  ಇಲಾಖಾ ವತಿಯಿಂದ ಅನುದಾನ ಒದಗಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರಿಗೆ ಭಕ್ತರ ಪರವಾಗಿ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ, ಮುಜರಾಯಿ ಇಲಾಖೆಗೆ ಸೇರಿದ ಸಿ ವರ್ಗದ ಈ ದೇವಸ್ಥಾನಕ್ಕೆ ಯಾವುದಾದರೊಂದು ಅಭಿವೃದ್ಧಿ ಕಾರ್ಯಕ್ಕೆ ತನಗೆ ಬರುವ ಅನುದಾನದಲ್ಲಿ ಒಂದಿಷ್ಟು ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರ ಮನವಿ ಸಿದ್ಧಪಡಿಸಿ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸುವಂತೆ  ತಿಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಶಶಿಧರ್ ರೈ ಕುತ್ಯಾಳ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಕ್ಷೇತ್ರದ ಅರ್ಚಕ ಮಹಾಲಿಂಗೇಶ್ವರ ಭಟ್, ಪುತ್ತೂರು ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ಸ್ಥಳೀಯ ಪ್ರಮುಖರಾದ ರಾಮಣ್ಣ ಗೌಡ ಬಸವಹಿತ್ಲು, ಕೃಷ್ಣಪ್ರಸಾದ್ ರೈ ಪಡುಮಲೆ-ಬೆಳ್ಳಿಪ್ಪಾಡಿ,  ಮಹಾಲಿಂಗ ಪಾಟಾಳಿ ಕುದ್ಕಾಡಿ, ಜಯರಾಜ್ ಶೆಟ್ಟಿ ಅಣಿಲೆ, ವಿನೋದ್ ಶೆಟ್ಟಿ ಸೋಣಂಗಿರಿ, ನಾರಾಯಣ ಗೌಡ ಕನ್ನಡ್ಕ, ರಾಜೇಶ್ ರೈ ಪಡುಮಲೆ, ಪುರುಷೋತ್ತಮ ಗೌಡ ಕನ್ನಡ್ಕ, ದೈವನರ್ತಕ ನಾಗಪ್ಪ ಪರವ, ನವೀನ ಕನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here