ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವರ ಕಾಲಾವಧಿ ಜಾತ್ರೆ, ಮಖೆಜಾತ್ರೆ ಮತ್ತು ಉತ್ಸವಾದಿಗಳು ನಡೆಯುತ್ತಿದ್ದು, ಶ್ರೀ ದೇವರ ಆರಾಟ ಮಹೋತ್ಸವದ ಸಂದರ್ಭ ಹಳೆ ಬಸ್ ನಿಲ್ದಾಣದ ಬಳಿ ಗೆಳೆಯರು- 94 ಇವರಿಂದ 31ನೇ ವರ್ಷದ ‘ಸಂಗೀತ- ಗಾನ- ಸಂಭ್ರಮ’ ಕಾರ್ಯಕ್ರಮ ನಡೆಯಿತು.
ಕೇರಳ ಮತ್ತು ಕರ್ನಾಟಕದ ಪ್ರಖ್ಯಾತ ಗಾಯಕರ ತಂಡವನ್ನೊಳಗೊಂಡ ಮಂಗಳೂರಿನ ಅನುಗ್ರಹ ಮೆಲೋಡಿಸ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಗೆಳೆಯರು- 94 ಅಧ್ಯಕ್ಷ ಗುಣಕರ ಅಗ್ನಾಡಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪಕ ವೆಂಕಟೇಶ್ ರಾವ್, ಪ್ರಮುಖರಾದ ಚಂದಪ್ಪ ಮೂಲ್ಯ, ಯು.ಜಿ.ರಾಧಾ, ರವಿಕಿರಣ್ ಕೊಲ, ಜಗದೀಶ್ ಶೆಟ್ಟಿ, ವಾಮನ ಉಬಾರ್, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಯತೀಶ್ ಶೆಟ್ಟಿ, ಅಚಲ್ ಉಬರಡ್ಕ, ಲೊಕೇಶ್ ಆಚಾರ್ಯ, ಯತೀಶ್ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಶಶಿಧರ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.