ಪುತ್ತೂರು: ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಯಲ್ಲಿ ದೈವ ಸಾನ್ನಿಧ್ಯಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಅಂಗವಾಗಿ ಫೆ. 29ರಂದು ರಾತ್ರಿ ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಂಜೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳಿಗೆ ಸ್ವಾಗತ ನೀಡಲಾಯಿತು. ಈ ವೇಳೆ ತರವಾಡು ಸಲಹಾ ಸಮಿತಿಯ ಗೌರವಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಕೆಳಗಿನ ಕುಂಜಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕರವರು ಆಗಮಿಸಿದರು. ತರವಾಡು ಸಲಹಾ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ರೈ ಕೆಳಗಿನಕುಂಜಾಡಿ, ಅಧ್ಯಕ್ಷ ದೇವದಾಸ ರೈ ಕುಂಜಾಡಿ, ಪದಾಧಿಕಾರಿಗಳು, ಸದಸ್ಯರು, ಕುಟುಂಬಿಕರು ಮತ್ತು ಬಂಧುಗಳು, ಬಂಬಿಲ ಹಾಗೂ ಕುಂಜಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಇಂದು ಪ್ರತಿಷ್ಠಾ ಕಲಶಾಭಿಷೇಕ, ನೇಮೋತ್ಸವ
ತರವಾಡು ದೈವ ಸಾನ್ನಿಧ್ಯಗಳ ಪ್ರತಿಷ್ಠಾ ಕಲಶಾಭಿಷೇಕವು ಮಾ. 1 ರಂದು ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು ಬಳಿಕ ನೇಮೋತ್ಸವ ಜರಗಲಿದೆ.