ಮಣಿಕ್ಕಳ: ದೈವಗಳ ವಾರ್ಷಿಕ ನೇಮೋತ್ಸವ

0

ನೆಲ್ಯಾಡಿ; ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮಣಿಕ್ಕಳ ಮೂವರು ದೈವಗಳ ವಾರ್ಷಿಕ ನೇಮೋತ್ಸವ ಫೆ.28-29ರಂದು ನೇಮೋತ್ಸವ ನಡೆಯಿತು. ಮಣಿಕ್ಕಳ ಗ್ರಾಮದ ಭಕ್ತರ ನಂಬಿಕೆಯ ತಾಣವಾದ ಕಂರ್ಬಿತ್ತಿಲು ಬದಿಮಾಡದಲ್ಲಿ ಪ್ರತೀ ವರ್ಷ ಫೆ.28ರಂದು ಈ ವಾರ್ಷಿಕ ನೇಮೋತ್ಸವ ನಡೆಯುತ್ತಿದೆ. ಮೂವರು ದೈವಗಳಾದ ಪಾಂಡ್ಯತ್ತಾಯ, ಪಂಬೆತ್ತಾಯ, ನಾಗಬ್ರಹ್ಮ, ಆಲಾಜೆ ಚಾಮುಂಡಿ, ಪೋರೋಳಿತ್ತಾಯ, ಬ್ರಾಣಮಾಣಿ ಸಹಿತ ಸುಮಾರು 22 ದೈವಗಳಿಗೆ ನರ್ತನ ಸೇವೆ ನಡೆಯಿತು.


ಮಣಿಕ್ಕಳ ಸಮಸ್ತದೈವಗಳ ಸೇವಾ ಸಮಿತಿ, ತಲೆಮನೆ ಕಾಂಚನ, ಮಣಿಕ್ಕಳ ಗುತ್ತು-ಬಾರಿಕೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಈ ನೇಮೋತ್ಸವ ನಡೆಯುತ್ತಿದ್ದು, ಮರೋಜಿಕಾನ ಎಂಬಲ್ಲಿ ಈ ದೈವಗಳ ಮೂಲಸ್ಥಾನವಿದೆ. ಈ ತಾಣದ ವಿಶೇಷತೆಯೆಂದರೆ ಕಂರ್ಬಿತ್ತಿಲು ಬದಿಮಾಡದಲ್ಲಿ ಹುತ್ತದಲ್ಲಿ ದೈವಗಳು ನೆಲೆಸಿವೆ. ಪ್ರಸಿದ್ಧ ದೈವ ನರ್ತಕ ಸುಬ್ಬಣ್ಣ ಪಂಡಿತರು ಹಾಗೂ ಅವರ ತಂಡ ಈ ನರ್ತನ ಸೇವೆಯನ್ನು ಪರಂಪರಾದಿಯಾಗಿ ನಡೆಸಿಕೊಂಡು ಬರುತ್ತಿದೆ. ಗುತ್ತಿಮಾರು ಗದ್ದೆಕೋರಿ, ನಾಗತಂಬಿಲ, ದೊಂಪದ ಬಲ ನೇಮೋತ್ಸವ ನಡೆಯುವ ಈ ಮಣಿಕ್ಕಳ ಗ್ರಾಮಸ್ಥರ ಶ್ರದ್ಧಾಭಕ್ತಿಯ ತಾಣ ಈ ಮೂವರು ದೈವಗಳ `ಮಾಡ’ವಾಗಿದೆ. ನೇರೆಂಕಿ ಅರಸರ ಆಳ್ವಿಕೆ ಸುಪರ್ದಿಯಲ್ಲಿದ್ದ ಮಣಿಕ್ಕಳ ಗ್ರಾಮದಲ್ಲಿ ಮೂವರು ದೈವಗಳ ನೇಮೋತ್ಸವ ಕಳೆದ 1954ರಿಂದ ನಡೆದುಕೊಂಡು ಬರುತ್ತಿದೆ.

ಕಾಂಚನ ತಲೆಮನೆಯ ರೋಹಿಣಿ ಸುಬ್ಬರತ್ನಂ, ನಡ್ಪ ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕ್ಕಿಲ್ಲಾಯ, ಮಣಿಕ್ಕಳ ಬಾರಿಕೆ ಮನೆಯ ಮುರಳೀಧರ ರಾವ್, ಗುತ್ತುಮನೆಯ ಹೊನ್ನಪ್ಪ ಗೌಡ ಕುದುರು, ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿಯ ಜಗದೀಶ ರಾವ್ ಮಣಿಕ್ಕಳ, ರಾಮಣ್ಣ ಗೌಡ ಮೇಲಿನಮನೆ, ದೇರಣ್ಣ ಗೌಡ ಓಮಂದೂರು, ವಿಠಲ ಗೌಡ ಹೊಸಮನೆ, ಲಿಂಗಪ್ಪ ಗೌಡ ಆರಕರೆ, ಶೀನಪ್ಪ ಗೌಡ ಓಲೆಬಳ್ಳಿ, ಮುಂಡಪ್ಪ ಪೂಜಾರಿ, ರಾಮಣ್ಣ ಗೌಡ ಆರಕರೆ, ಕೇಶವ ಗೌಡ ಮರೋಜಿಕಾನ, ಸುಧಾಕರ ಗೌಡ ನಾತೊಟ್ಟು, ಉಮೇಶ್ ಮಾಯಿತಾಲು, ರಮೇಶ್ ಗೌಡ ಬರೆಮೇಲು, ರುಕ್ಮಯ್ಯ ಗೌಡ ಓಮಂದೂರು, ಅಣ್ಣಿ ಪೂಜಾರಿ, ದಿನೇಶ್ ಓಮಂದೂರು, ಲೊಕೇಶ್ ಪಾಲೆತ್ತಾಡಿ, ವಸಂತ ಬರೆಮೇಲು, ಧನಂಜಯ ಗೌಡ ಗುತ್ತಿಮಾರು, ರಾಜೇಶ್ ಹೊಸಮನೆ, ಧನಂಜಯ ಪಾಲೆತ್ತಾಡಿ, ಯೋಗೀಶ್ ಹೊಸಮನೆ ಸಹಿತ ನೂರಾರು ಮಂದಿ ಗ್ರಾಮಸ್ಥರು ಈ ವಾರ್ಷಿಕ ನರ್ತನ ಸೇವೆಯ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮಣಿಕ್ಕಳ ಬೆಡಿ:
ಕಳೆದ ವರ್ಷ ಕಂರ್ಬಿತ್ತಿಲು ಬದಿಮಾಡದ ಪ್ರತಿಷ್ಠಾ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಯೂತ್ ಫ್ರೆಂಡ್ಸ್ ಸರ್ಕಲ್ (ವೈಎಫ್‌ಸಿ) ಮಣಿಕ್ಕಳ ಇದರ ವತಿಯಿಂದ ಆರಂಭಿಸಲಾದ ಮಣಿಕ್ಕಳ ಬೆಡಿ ಈ ವರ್ಷವೂ ನೆರೆದಿದ್ದ ಭಕ್ತರ ಮನಕ್ಕೆ ಮುದ ನೀಡಿತು. ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ರಂಗುರಂಗಿನ ಬಣ್ಣದ ಲೋಕ ನೋಡುಗರ ಕಣ್ಣುಗಳಿಗೆ ರಸದೌತಣ ನೀಡಿತು.

LEAVE A REPLY

Please enter your comment!
Please enter your name here