ಪುತ್ತೂರು :ದ.ಕ ಜಿಲ್ಲೆಯಲ್ಲಿ ಅಡಿಕೆ ಆಮದಿನಿಂದಾಗಿ ಅಡಿಕೆಯ ಬೆಲೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ರೈತ ಒಕ್ಕೂಟವು ಅಡಿಕೆ ಆಮದು ನಿಷೇಧಿಸುವಂತೆ ಹಾಗೂ ಇತರೆ ಬೇಡಿಕೆಗಳೊಂದಿಗೆ ಮಾ.7ರಂದು ಬಿ.ಸಿ ರೋಡಿನಿಂದ ಮಧ್ಯಾಹ್ನ 2ಗಂಟೆಯಿಂದ ಟ್ರ್ಯಾಕ್ಟರ್ ವಾಹನ ಜಾತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ನಾಲ್ಕು ಗಂಟೆಗೆ ಬೃಹತ್ ಪ್ರತಿಭಟನಾ ಸಭೆಯನ್ನು ಮಾಡಲಾಗುವುದೆಂದು ದ.ಕ ರೈತ ಸಂಘಗಳ ಒಕ್ಕೂಟದ ಸಂಯೋಜಕ ಸನ್ನಿ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಿಟಿಷರು ತಮ್ಮ ಕಾರ್ಖಾನೆಗಳಿಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ವಸ್ತುಗಳು ಬೇಕೆಂದು ಕೃಷಿ ಉತ್ಪನ್ನಗಳ ಬೆಲೆಯನ್ನು ಹತೋಟಿಯಲ್ಲಿಟ್ಟು ರೈತರನ್ನು ಹೊಟ್ಟೆಗೆ ಹೊಡೆಯುತ್ತಿದ್ದರು. ಬ್ರಿಟಿಷರಿಂದ ಸ್ವಾತಂತ್ರ ದೊರಕಿದ ನಂತರವೂ ನಮ್ಮ ಸರಕಾರಗಳು ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಇದ್ದು ಅದೇ ನೀತಿಯನ್ನು ಮುಂದುವರಿಸಿ ರೈತರನ್ನು ತುಳಿಯುವ ಕೆಲಸವನ್ನು ಮುಂದುವರಿಸುತ್ತಾ ಇದ್ದಾರೆ.ಜಾಗತೀಕರಣದಿಂದ ವಿಶ್ವ ವಾಣಿಜ್ಯ ವ್ಯಾಪಾರ ಸಂಸ್ಥೆ WTO ಒಪ್ಪಂದದೊಂದಿಗೆ ರೈತ ವಿರೋಧಿ ನೀತಿಗಳಿಂದಾಗಿ ರೈತರು ಸಾಲಗಾರರಾಗಿ ಮೂರುವರೆ ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅಡಿಕೆ ಹಾಗೂ ತೆಂಗು ಬೆಳೆಗಳು ಮುಖ್ಯ ಆರ್ಥಿಕ ಬೆಳೆಗಳಾಗಿ ರೈತರು ತಮ್ಮ ಆರ್ಥಿಕ ಪ ಈ ಪರಿಸ್ಥಿತಿಯನ್ನು ಸದೃಢವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಎಳೆ ಚುಕ್ಕಿ ರೋಗ ಹಳದಿ ಎಲೆ ರೋಗ ಹಾಗೂ ತೆಂಗಿನ ಬೆಲೆ ಕುಸಿತದಿಂದಾಗಿ ನಮ್ಮ ಜಿಲ್ಲೆಯಲ್ಲಿ ಕೂಡ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಯು ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೈತ ಸಂಘಗಳ ಒಕ್ಕೂಟವು ರಚನೆಯಾಗಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ತರುವ ಪ್ರಯತ್ನವು ಪ್ರಾರಂಭವಾಗಿದೆ. ಅಡಿಕೆಯ ಆಮದಿನಿಂದ ಬೆಲೆ ಕುಸಿತ ಉಂಟಾಗಿ ಜಿಲ್ಲೆಯ ರೈತರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ ಎಂದರು .
ಮುಖ್ಯ ಬೇಡಿಕೆಗಳಾದ ಅಡಿಕೆ ಹಾಗೂ ತೆಂಗಿನ ಆಮದಲ್ಲೂ ಸಂಪೂರ್ಣವಾಗಿ ನಿಷೇಧಿಸಬೇಕು,ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನ ಮಾಡಿದ ಸರಕಾರ ಸರಕಾರದ ತಪ್ಪು ನೀತಿಯಿಂದಾಗಿ ರೈತರು ಸಾಲಗಾರರಾಗಿದ್ದಾರೆ ಆದ್ದರಿಂದ ರೈತರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುವ ರೈತರ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು,ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು,ಧಾರ್ಮಿಕ ಸಂಘರ್ಷದಲ್ಲಿ ಮೃತಪಟ್ಟವರಿಗೆ ಸರಕಾರವು ನೀಡಿದ 25 ಲಕ್ಷ ಸಹಾಯಧನ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ನೀಡಬೇಕು.ಎಲೆ ಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ಭಾದಿತ ರೈತರಿಗೆ ಪ್ರತಿ ಎಕರೆಗೆ 25,000″ ಸಹಾಯಧನವನ್ನು ನೀಡಬೇಕು,ಬಂಟ್ವಾಳದ ಮೂಲಕ ಹಾದುಹೋಗುವ 400 ಕೆ ವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕಾಗಿರುವುದು ರೈತರ ಮುಖ್ಯ ಬೇಡಿಕೆ ಎಂದರು.
- ರೈತರ ಬೇಡಿಕೆಗಳು
- ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು.ಕೃಷಿಕರು ಮತ್ತು ಕೃಷಿಕಾರ್ಮಿಕರಿಗೆ ಪಿಂಚಣಿ ನೀಡಬೇಕು. ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು.ರೈತ ಹೋರಾಟಗಾರರ ಮೇಲಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಈ ಲಖೀಮ್ ಪುರ ಖೇರಿ ಹಿಂಸಾಚಾರದಲ್ಲಿ ಬಲಿಪಶುಗಳಾದವರಿಗೆ ನ್ಯಾಯ ಸಿಗಬೇಕು. 2013ರ ಭೂಸ್ವಾಧೀನ ಕಾಯ್ದೆಯನ್ನು (ಭೂ ಸ್ವಾಧೀನದ ವೇಳೆ ಸರಿಯಾದ ಪರಿಹಾರ, ಪಾರದರ್ಶಕತೆ) ಪುನಃಸ್ಥಾಪಿಸಬೇಕು.ವಿಶ್ವವಾಣಿಜ್ಯ ಸಂಸ್ಥೆಯಿಂದ ಭಾರತ ಹೊರಬರಬೇಕು.ಹಿಂದಿನ ಹೋರಾಟಗಳಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಪ್ರತಿಭಟನಾ ಸಭೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಓಸ್ವಾಲ್ಡ್ಸ್ ಫೆರ್ನಾಂಡಿಸ್, ಅಮರನಾಥ ಆಳ್ವ, ಕಲೀಲ್ ಇಬ್ರಾಹಿಂ, ಭರತ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.