ಪುತ್ತೂರು: ಕೆಲವು ದಿನಗಳ ಹಿಂದೆ ರಿಕ್ಷವೊಂದು ಅಪಘಾತವಾಗಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೂರ್ನಡ್ಕ ಮರಿಲ್ ಐ.ಕೆ. ಕಂಪೌಂಡ್ ನಿವಾಸಿ ಮುಹಮ್ಮದ್ ರಫೀಕ್ (45 ವ) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮಾ.2 ರಂದು ರಾತ್ರಿ ನಿಧನರಾದರು.
ಕೆಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ತನ್ನ ಸ್ವಂತ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಕೂರ್ನಡ್ಕ ನಿವಾಸಿ ದಿವಂಗತ ಇಬ್ರಾಹಿಂ ರವರ ಪುತ್ರರಾದ ಮುಹಮ್ಮದ್ ರಫೀಕ್ ರವರು ಈ ಹಿಂದೆ ಪುತ್ತೂರು ಬಸ್ ನಿಲ್ದಾಣದ ಬಳಿಯ ಎ.ಎಂ. ಕಾಂಪ್ಲೆಕ್ಸ್ ನಲ್ಲಿ ಸ್ಕೈ ಎಂಬ ಮೊಬೈಲ್ ಶಾಪ್ ಹೊಂದಿದ್ದರು. ಮೃತರು ತಾಯಿ, ಪತ್ನಿ, ಐದು ವರ್ಷದ ಒಳಗಿನ ಮೂರು ಮಂದಿ ಪುತ್ರರನ್ನು ಹಾಗೂ 9 ಮಂದಿ ಸಹೋದರನ್ನು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.