ಪುತ್ತೂರು: ನರಿಮೊಗರು ಗ್ರಾಮದ ಮುಗೇರಡ್ಕ ಪೊಸಮೆನ್ಪದವು ಶ್ರೀಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.2ರಂದು ದೈವಗಳ ವರ್ಷಾವಧಿ ನೇಮೋತ್ಸವವು ನೆರವೇರಿತು.
ಬೆಳಿಗ್ಗೆ ಗಣಹೋಮ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು, ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದ್ಕೆರೆ ಕಲ್ಪಿ ಖ್ಯಾತಿಯ ಸಂಸಾರ ಕಲಾವಿದೆರ್ ಪುತ್ತೂರು ಇವರಿಂದ `ನಂಬಿಕೆದಾಯೆ’ ಪ್ರದರ್ಶನ ನಡೆದ ಬಳಿಕ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು. ದೈವಸ್ಥಾನದ ಪದಾಧಿಕಾರಿಗಳು ಹಾಗೂ ಭಕ್ತಾದಿಕಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿ ನೇಮೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.