





ನಿಡ್ಪಳ್ಳಿ: ಅಜ್ಜಿಕಲ್ಲು ಮುಂಡೋದಮೂಲೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಮಾ.3ರಂದು ಭೇಟಿ ನೀಡಿ ಲಸಿಕೆ ಹಾಕಿದರು. ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಒಳಮೊಗ್ರು ಗ್ರಾಮ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಆಶಾ ಕಾರ್ಯಕರ್ತೆ ಸರೋಜಿನಿ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ರತಿ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.










